ಶಿಕ್ಷಕ, ಪತ್ರಕರ್ತ, ಸಾಹಿತಿ, ರೈತ ಹೋರಾಟಗಾರ, ಶರಣಾನುಯಾಯಿ ಹೀಗೆ ಹತ್ತು ಹಲವು ವಲಯಗಳಲ್ಲಿ ಮಾದರಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆ ಅವರ ಒಡನಾಟದಿಂದ ಪ್ರಭಾವಿತಗೊಂಡ ಲೇಖಕ ಶಿವಣ್ಣ ಇಜೇರಿ, ಲಿಂಗಣ್ಣನವರಿಗೆ ಸಂಬಂಧಿಸಿದ ಒಂದೊಂದು ವಲಯದಲ್ಲಿ ಕಂಡುಕೊಂಡ ಹೋರಾಟದ ಅಸಾಧಾರಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೃತಿಯೇ ’ದಾರಿ ದೀಪ’. ಬಹುವರ್ಷದ ತೀರಾ ಹತ್ತಿರದ ಒಡನಾಟದಿಂದಾಗಿ ಲೇಖಕರು, ಕೆಲ ರಸನಿಮಿಷಗಳೂ ಸೇರಿದಂತೆ ಲಿಂಗಣ್ಣ ಸತ್ಯಂಪೇಟೆ ಅವರ ನೈಜ ಹಾಗೂ ಸಮಗ್ರ ಬದುಕನ್ನು ತಮ್ಮದೇ ರೀತಿಯಲ್ಲಿ ಚಿತ್ರಿಸಿದ್ದಾರೆ.
ಶಹಾಪುರದ ಅಡತಿ ಅಂಗಡಿವೊಂದರಲ್ಲಿ ಗುಮಾಸ್ತರಾದ ಶಿವಣ್ಣ ಇಜೇರಿ ಅವರು ಸಾಹಿತ್ಯಾಸಕ್ತರು. ವಚನ ಸಾಹಿತ್ಯ ತತ್ವ ಅನುಯಾಯಿ. ಉಡಿಯಲ್ಲಿಯ ಉರಿ, ಆಧುನಿಕ ವಚನಗಳು , ಕರಗದ ಬೆಣ್ಣೆ ಹೀಗೆ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರಣರ ವಚನಗಳ ವಿಶ್ಲೇಷಕರು. ’ಬಸವ ಮಾರ್ಗ’ ಮಾಸಿಕದಲ್ಲಿ ಲೇಖಕರು. ಶರಣರ ವಿಚಾರ ಪ್ರಸಾರ-ಪ್ರಚಾರಕ್ಕಾಗಿ ಹಿರಿಯ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಬಸವ ಮಾರ್ಗ ಪ್ರತಿಷ್ಠಾನದಿಂದ ಆರಂಭಿಸಿದ”ಮನೆಯಲ್ಲಿ ಮಹಾಮನೆ’ ಚಿಂತನಾ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ...
READ MORE