ಜೋಳದರಾಶಿ ದೊಡ್ಡನಗೌಡರು

Author : ಬಸವರಾಜ ಮಲಶೆಟ್ಟಿ

Pages 168

₹ 25.00




Year of Publication: 2005
Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ಶ್ರೀಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ

Synopsys

‘ಜೋಳದರಾಶಿ ದೊಡ್ಡನಗೌಡರು’ ಡಾ. ಬಸವರಾಜ ಮಲಶೆಟ್ಟಿ ಅವರು ರಚಿಸಿರುವ ಕೃತಿ. ನಾಟಕಕಾರರಾಗಿ, ಕವಿಗಳಾಗಿ, ಗಮಕಿಗಳಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸುಪ್ರಸಿದ್ಧರಾಗಿದ್ದ ಜೋಳದರಾಶಿ ದೊಡ್ಡನಗೌಡರು ನಾಡಿನುದ್ದಕ್ಕೂ ಜನರ ಕಿವಿಗೆ ಕಾವ್ಯದ ಕಂಪುಣಿಸಿದವರು. ಸಾಹಿತ್ಯ ಸಮ್ಮೇಳನಗಳಲ್ಲೂ ಕಾವ್ಯವಾಚನ - ಪ್ರವಚನಗಳನ್ನು ಮಾಡಿದವರು. ರಂಗನಟ, ಬರಹಗಾರರೂ ಆಗಿದ್ದ ಗೌಡರು ತಮ್ಮಷ್ಟಕ್ಕೆ ತಾವೇ ಕನ್ನಡ ಸಾಂಸ್ಕೃತಿಕ ಪರಿಚಾರಕನಂತೆ ಮಹತ್ವದ ಕೆಲಸ ಮಾಡಿದವರು. ಅವರ ಬದುಕು-ಬರಹಗಳ ಕುರಿತಾದ ಮಾಹಿತಿಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

About the Author

ಬಸವರಾಜ ಮಲಶೆಟ್ಟಿ
(10 August 1949 - 29 June 2014)

ಜಾನಪದ ತಜ್ಞರಾಗಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ಉತ್ತರ ಕರ್ನಾಟಕದ ಬಯಲಾಟಕ್ಕೆ ವಿಶಿಷ್ಟ ಸ್ಪರ್ಶ ನೀಡಿದವರು. ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಮಲಶೆಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿಯವರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಬಸವರಾಜ ಮಲಶೆಟ್ಟಿಯವರು ಜನಿಸಿದ್ದ 1949ರ ಆಗಸ್ಟ್‌ 10ರಂದು ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಬಾಲ್ಯದ ದಿನಗಳಲ್ಲಿಯೇ ರಂಗಭೂಮಿಯ ಒಡನಾಟ ಆರಂಭವಾಯಿತು. ತಂದೆಯ ಜೊತೆಯಲ್ಲಿ ಆಟಕ್ಕೆ ಹೋಗುತ್ತಿದ್ದ ಬಸವರಾಜ ಅವರು ಬಯಲಾಟದಲ್ಲಿ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ...

READ MORE

Related Books