ತೆರೆ ಸರಿಯಿತು

Author : ಗುಡಿಹಳ್ಳಿ ನಾಗರಾಜ

Pages 102

₹ 80.00




Year of Publication: 2013
Published by: ಕೆ.ಬಿ.ಪ್ರಗತಿ, ಬರಹ ಪಬ್ಲಿಷಿಂಗ್ ಹೌಸ್
Address: #119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ ಆರ್.ಪಿ.ಸಿ ಲೇಔಟ್ , ಬೆಂಗಳೂರು- 104
Phone: 08023409512

Synopsys

ಗುಡಿಹಳ್ಳಿ ನಾಗರಾಜ ಅವರು ರಂಗಕಲಾವಿದೆ ಮಾಲತಿಶ್ರೀ ಮೈಸೂರು ಅವರ ಬಗ್ಗೆ ಕಟ್ಟಿಕೊಟ್ಟ ಬಣ್ಣದ ಲೋಕದ ಬದುಕಿನ ಕಥಾನಕ ‘ತೆರೆ ಸರಿಯಿತು’ ಕೃತಿ.

ಕಾಲಗರ್ಭದಲ್ಲಿ ಕಾಣೆಯಾಗಿ ಬಿಡುವ ಇಂತಹ ಮಹಾನ್ ಪ್ರತಿಭೆಗಳನ್ನು ಮತ್ತೆ ಓದುಗರ ಮನೋರಂಗದಲ್ಲಿ ಮೂಡಿಸುವ ಕೆಲಸವಿದೆಯಲ್ಲ ಅದು ಅತ್ಯಂತ ಮಹತ್ವದ್ದು. ಈ ಆತ್ಮಕತೆ ಸುಧಾ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಸಾರವಾಗಿತ್ತು. ಬದುಕು ಮತ್ತು ಬಣ್ಣದ ಒಡನಾಟದಲ್ಲಿ ಮಾಲತಿಶ್ರೀ ಅವರ  ಬಣ್ಣದ ಬದುಕಿನ ವ್ಯಕ್ತಿತ್ವದ ಬಗ್ಗೆ ಈ ಕೃತಿ ವಿವರಿಸುತ್ತದೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books