ಲೇಖಕ ಸದಾನಂದ ಕನವಳ್ಳಿ ಅವರು ಸಂಗೀತ ಲೋಕದ ಮಾಂತ್ರಿಕ ಭೀಮಸೇನ ಜೋಶಿ ಅವರ ಬಗ್ಗೆ ಬರೆದ ವ್ಯಕ್ತಿ ಚಿತ್ರ ‘ಭಾರತ ರತ್ನ ಭೀಮಸೇನ ಜೋಶಿ. ಪಂಡಿತ್ ರಾಜೀವ್ ತಾರಾನಾಥ್ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಎಂ.ಎಂ ಕಲಬುರ್ಗಿ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ, ಯುಗಪುರುಷ ಭೀಮಸೇನ ಜೋಶಿ ಅವರಿಗೆ ಸ್ವರವಿಜ್ಞಾನ ಎಂಬುದು ಜನಜಾತ ಅಂಗ, ಪ್ರಾಣ, ಭಾವವಾಗಿದ್ದವು. ಜಾಗತಿಕ ಮಟ್ಟದಲ್ಲಿ ಇಂತ ಕಲಾವಿದರು ಕನ್ನಡಿಗನೆಂಬುದು ನಮ್ಮ ನಾಡಿಗೆ ದೊಡ್ಡ ಹೆಮ್ಮೆ, ದೊಡ್ಡ ಅಭಿಮಾನ. ಇವರನ್ನು ಕುರಿತು ಅನೆಕ ಭಾಷೆಗಳಲ್ಲಿ ಅನೇಕ ಕೃತಿಗಳು ಹುಟ್ಟಿವೆ, ಕನ್ನಡದಲ್ಲಿಯೂ. ಆದರೂ ಒಂದು ಪೂರ್ಣ ಪ್ರಮಾಣದ ಕೃತಿಯ ಕೊರತೆ ನಮ್ಮನ್ನು ಕಾಡುತ್ತಲಿದ್ದಿತು. ಪ್ರೊ.ಕನವಳ್ಳಿಯವರ ಕೃತಿ ಬರುವವರೆಗೂ ನಾವು ಖಾಯಬೇಕಾಯಿತು ಎಂಬುದಾಗಿ ಹೇಳಿದ್ದಾರೆ. ಕೃತಿಯ ಪರಿವಿಡಿಯಲ್ಲಿಪರ್ವತವೆ ಮೊಹಮ್ಮದನೆಡೆಗೆ, ಬೆಳೆಯುವ ಸಿರಿ ಮೊಳಕೆಯಲ್ಲಿ, ಸಂಗೀತ ಬೀಂಜಾಕುರ, ಗುಉರವೆ, ಎಲ್ಲಿರುವೆ?, ದೊರಕಿದಾ ಗುರು ದೊರಕಿದಾ, ಸವಾಯಿ ಗಂಧರ್ವ,ಕಿರಾಣಾ ಘರಾನಾ, ಸವಾಯಿ ಗಂಧರ್ವರ ಗರಡಿಯಲ್ಲಿ, ಏಕಪಾಠಿ, ಗೂಡಿನಿಂದ ನಾಡಿಗೆ, ಬೇಗಂ ಅಖ್ತರ್, ಸೇರಿದಂತೆ 25 ಶೀರ್ಷಿಕೆಗಳ ಬರಹಗಳಿವೆ.
ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...
READ MORE