ಭೂಮಿಯ ವಾತಾವರಣ ಹಿಂದೆ ಹೇಗಿತ್ತು? ಪ್ರಾಚೀನ ಸಸ್ಯಗಳ ಸ್ವರೂಪ ಹೇಗಿತ್ತು? ಮುಂತಾದವುಗಳನ್ನು ಕ್ರಮವಾಗಿ ಅರಿತರೆ ಭೂಮಿಯ ಚರಿತ್ರೆಯ ಅಧ್ಯಾಯಗಳನ್ನು ವೈಜ್ಞಾನಿಕವಾಗಿ ಅರಿಯುವುದು ಸಾಧ್ಯ. ಇಂಥ ವಿಶೇಷ ವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡಿದವರು ಬೀರ್‍ಬಲ್ ಸಾಹ್ನಿ.
ಲಕ್ನೋದಲ್ಲಿ ಅವರ ಹೆಸರಿನಲ್ಲಿ ಒಂದು ದೊಡ್ಡ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳಾಗುತ್ತಿವೆ. ಬೀರ್ ಬಲ್ ಸಾಹ್ನಿ ಅವರು ಪ್ರಾಚೀನ ಸಸ್ಯಗಳ ಹಲವು ಪ್ರಭೇದಗಳನ್ನು ಪಳೆಯುಳಿಕೆ ರೂಪದಲ್ಲಿ ಸಂಗ್ರಹಿಸಿ, ಅವುಗಳ ವೈಜ್ಞಾನಿಕ ಮಾಹಿತಿಯನ್ನು ಜಗತ್ತಿಗೆ ಸಾರಿದರು. ಅವರ ಬಾಲ್ಯ, ವಿದ್ಯಾಭ್ಯಾಸ, ಪ್ರಾಚೀನ ಸಸ್ಯಗಳ ಬಗ್ಗೆ ಅವರು ತೋರಿದ ಒಲವು-ಇವುಗಳನ್ನು ಕುರಿತು ಈ ಕೃತಿಯಲ್ಲಿ ಕುತೂಹಲಕಾರಿ ಅಂಶಗಳಿವೆ. ಪ್ರಾಚೀನ ಸಸ್ಯಗಳ ಅಧ್ಯಯನ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದಿತ್ತು. ಅವರು ಸಂಗ್ರಹಿಸಿದ ಎಲ್ಲ ಮಾದರಿಗಳನ್ನು ಲಕ್ಮೋದ ಸಾಹ್ನಿ ಸಂಸ್ಥೆಯಲ್ಲಿ ಈಗಲೂ ಕಾಣಬಹುದು. ಅಂತಹ ಮಹತ್ವದ ವಿಜ್ಞಾನಿಯ ಜೀವನ ಚರಿತ್ರೆಯೇ ಈ ಕೃತಿ.
ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ. ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ...
READ MORE