ಮಂಡ್ಯ ರಮೇಶ್ ನಟನ ಕಥೆ ಧನಂಜಯ .ಎನ್ ಅವರ ಕೃತಿ. ನಟನ ಕಥೆ. ಮಂಡ್ಯ ರಮೇಶ್ ಕಟ್ಟಿದ ನಾಟಕ ಕೂಟದ ಸಾಹಸಗಾಥೆ. ಭೂಮಿ ಪಡೆಯುವುದರಿಂದ ಕಟ್ಟಡ ಕಟ್ಟುವವರೆಗಿನ ಬವಣೆಗಳು ಮನಸ್ಸನ್ನು ತಟ್ಟುತ್ತವೆ. ಜೊತೆಗೆ ಮಂಡ್ಯ ರಮೇಶ್ ಅವರು ನಟನೆಯನ್ನು ಕಲಿಸುವ ಬಗೆ, ಇವೆಲ್ಲದರ ವಿವರಗಳಿವೆ. ಕನ್ನಡ ಸ್ಪಷ್ಟವಾಗಿ ಮಾತಾಡಲು ಬರದ ಮಕ್ಕಳು ರಜಾಮಜಾ ಕೂಟ ಸೇರಿ ವೇದಿಕೆ ಹತ್ತುವ ಭಯ ಕಳೆದು ನಟಿಸಲು ಸಾಧ್ಯವಾಗುವುದು ಮಂಡ್ಯ ರಮೇಶ್ ಅವರ ಪ್ರೋತ್ಸಾಹದಿಂದ. ಇಂಥ ಹಲವು ಸಂಗತಿಗಳನ್ನು ಈ ಕೃತಿ ಹೇಳುತ್ತದೆ.
ಎನ್. ಧನಂಜಯ ಅವರು ಹವ್ಯಾಸಿ ರಂಗಭೂಮಿ ಕಲಾವಿದ. ಕಳೆದ ಇಪ್ಪತ್ತು ವರ್ಷಗಳಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕರಾಗಿದ್ದಾರೆ. ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಮೈಸೂರಿನ ಅನೇಕ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ ಇವರು ಮೈಸೂರು ಆಕಾಶವಾಣಿ ನಾಟಕ ವಿಭಾಗದ 'ಬಿ' ಗ್ರೇಡ್ ಕಲಾವಿದ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 2005ರಲ್ಲಿ ಕಲಾವಿದ ನಾಗರಾಜ್ ಕೋಟೆಯವರ ತಂಡದ ಜೊತೆ ಬೆಂಗಳೂರಿನಲ್ಲಿ ಮರದ ಮೇಲೆ "ನೆಲೆ" ಎಂಬ ನಾಟಕ ಪ್ರದರ್ಶಿಸಿ ಅದು ಲಿಮ್ಕಾ ಪುಸ್ತಕ ದಾಖಲೆಗೆ ಸೇರಿದೆ. "ರಂಗ ಸ್ಪಂದನ" ಎಂಬ ರಂಗ ಸಂಬಂಧಿ ಲೇಖನಗಳ ಪುಸ್ತಕ ಬರೆದಿದ್ದಾರೆ. ಅದರ ಜೊತೆ ಅನೇಕ ರಂಗ ಸಂಬಂಧಿ ಪುಸ್ತಕಗಳಿಗೆ(ಅಭಿನಂದನಾ ...
READ MORE