‘ನಾಡಿನ ಹಾಡು ರವೀಂದ್ರನಾಥ ಠಾಕೂರ್’ ಲೇಖಕ ನಾ. ಸೋಮೇಶ್ವರ ಅವರ ಪ್ರಧಾನ ಸಂಪಾದಕತ್ವದಲ್ಲಿ ಬಂದ ಈ ಕೃತಿಯನ್ನು ಜ.ನಾ. ತೇಜಶ್ರಿ ರಚಿಸಿದ್ದಾರೆ. ಇಲ್ಲಿ ರವೀಂದ್ರನಾಥ ಠಾಕೂರರ ಬದುಕು ಬರಹಗಳ ಕುರಿತ ಮಾಹಿತಿಗಳಿವೆ. ಕನ್ನಡದ ಕುವೆಂಪು, ಬೇಂದ್ರೆ ಮುಂತಾದವರು ರವೀಂದ್ರನಾಥ ಠಾಕೂರ್ ಅವರ ಸಾಹಿತ್ಯದಿಂದ ಪ್ರೇರಿತರಾದವರು. ಅನಕೃ ಶಾಂತಿನಿಕೇತನದಲ್ಲಿಯೇ ಕಲಿತವರು. ರವೀಂದ್ರರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಗೀತಾಂಜಲಿಯು 20 ಸಲ ಕನ್ನಡಕ್ಕೆ ಅನುವಾದವಾಗಿದೆ ಎಂದರೆ ಅವರ ಸಾಹಿತ್ಯದ ಪ್ರಭಾವದ ಬಗ್ಗೆ ಯೋಚಿಸಬಹುದು. ರವೀಂದ್ರರ ರೇಖಾಚಿತ್ರ ಮತ್ತು ವರ್ಣಚಿತ್ರಗಳು ದೇಶವಿದೇಶಗಳಲ್ಲಿ ಪ್ರಸಿದ್ಧವಾಗಿದ್ದವು. ರವೀಂದ್ರರ ವರ್ಣ ವಿನ್ಯಾಸವು ಬಹು ವಿಶಿಷ್ಟವಾಗಿತ್ತು ಹಾಗೂ ಎಲ್ಲರಿಗಿಂತ ಭಿನ್ನವಾಗಿತ್ತು. ರವೀಂದ್ರರು ತಮ್ಮ 80ನೆಯ ವಯಸ್ಸಿನಲ್ಲಿ ಮರಣಿಸಲು ಕಾರಣ, ಅವರ ಪ್ರಾಸ್ಟೇಟ್ ಗ್ರಂಥಿಯ ಅತಿವೃದ್ಧಿ ನಿವಾರಣೆಗೆ ನಡೆದ ವಿಫಲ ಶಸ್ತ್ರಕ್ರಿಯೆ ಮುಗಿಸಿಕೊಂಡು ಬಂದು ಪೂರ್ಣಗೊಳಿಸುವುದಾಗಿ ಹೇಳಿದ್ದು, ಅದು ಸದಾ ಕಾಲಕ್ಕೂ ಅಪೂರ್ಣವಾಗಿ ಉಳಿದದ್ದು ಒಂದು ವಿಪರ್ಯಾಸ. ಇಂಥಹ ಹಲವು ಮಹತ್ವದ ವಿಚಾರಗಳನ್ನು ಲೇಖಕಿ ಜ.ನಾ. ತೇಜಶ್ರೀ ಈ ಕೃತಿಯಲ್ಲಿ ದಾಖಲಿಸಿದ್ದು ಠಾಕೂರ್ ಅವರ ಬಗ್ಗೆ ತಿಳಿಯಲು ಇದೊಂದು ಕೈಪಿಡಿಯಂತಿದೆ.
ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...
READ MORE