ರಾನ್‌ಜಿ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಬಿ. ಚಂದ್ರಶೇಖರ್ ಅವರು ರಚಿಸಿದ್ದಾರೆ. ಭಾರತ ಗೌರವಿಸುತ್ತಿರುವ ಪ್ರಸಿದ್ಧ ಕ್ರಿಕೆಟ್ ಆಟಗಾರ. ಭಾರತದ ಒಂದು ಕಿರಿಯ ಸಂಸ್ಥಾನದ ರಾಜಕುಮಾರನಾಗಿ ಹುಟ್ಟಿ, ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯ ಚಕ್ರವರ್ತಿಯಾದವನು. ಬಹು ದೊಡ್ಡ ಆಟಗಾರ, ಬಹು ದೊಡ್ಡ ವ್ಯಕ್ತಿ, ದೇಶಾಭಿಮಾನಿ ಎಂದು ರಾನ್‌ಜಿ ಬಗ್ಗೆ ಬರೆಯಲಾಗಿದೆ. ಇವರ ಬಾಲ್ಯ ಜೀವನ, ಬದುಕಿನ ತಿರುವು, ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ ಬಗೆ ಹೀಗೆ ಅವರ ಜೀವನದ ಹಲವು ಪ್ರಮುಖ ಘಟ್ಟಗಳನ್ನು ಲೇಕಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಹೆಚ್. ಬಿ ಚಂದ್ರಶೇಖರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆಯವರು. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಚಳ್ಳಕೆರೆಯಲ್ಲಿ, ಪದವಿ-ಪೂರ್ವ ಶಿಕ್ಷಣವನ್ನು ದಾವಣಗೆರೆಯಲ್ಲಿ, ಪದವಿ ಹಾಗೂ ಬಿ.ಇಡಿ ಪದವಿ ಚಿತ್ರದುರ್ಗದಲ್ಲಿ ನಂತರ ಎಂ. ಇ.ಡಿ ಪದವಿಯನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಣದಲ್ಲಿ ಪಿಎಚ್.ಡಿ ಪದವಿಯನ್ನು (ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ) ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕೃತಿಗಳು : ಯಶೋ ತೋಷ, ನೆಲೆ ನಿಂತ ನೆಲವ ನೀ ಬೆಳಗು ...
READ MORE