ಟಿ. ಪ್ರಕಾಶಂ ಅವರ ಜೀವನಚರಿತ್ರೆ ಪುಸ್ತಕವನ್ನು ಲೇಖಕ ರಾ. ಶ್ರೀನಾಗೇಶ್ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ‘ಆಂಧ್ರಕೇಸರಿ’ ಎಂದು ಪ್ರಸಿದ್ಧರಾದ ಧೀರ ದೇಶಭಕ್ತರು. ಸ್ವಾತಂತ್ರ್ಯದ ಹೋರಾಟಕ್ಕಾಗಿ ಸಾವಿರಾರು ರೂಪಾಯಿಗಳ ಆದಾಯವಿದ್ದ ವೃತ್ತಿಯನ್ನು ಬಿಟ್ಟವರು. ಸೆರೆಮನೆ ಸೇರಿದವರು. ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಜನತೆಯ ಸೇವೆ ಮಾಡಿದರು. ದಿಟ್ಟ ಪತ್ರಿಕೋದ್ಯಮಿ ಎಂದು ಪ್ರಕಾಶಂ ಅವರ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ಇಲ್ಲಿ ಪ್ರಕಾಶಂ ಅವರ ಬಾಲ್ಯ ಜೀವನ, ಸ್ವತಾಂತ್ರ್ಯ ಹೋರಾಟದ ದಿನಗಳು, ಬದುಕಿನ ಏರಿಳಿತಗಳು, ಪತ್ರಕೋದ್ಯಮದಲ್ಲಿ ಮಾಡಿದ ಸಾಧನೆ ಹೀಗೆ ಅವರ ಬದುಕಿನ ವಿವಿಧ ಆಯಾಮಗಳನ್ನು ಲೇಖಕರು ಈ ಕೃತಿಯಲ್ಲಿ ನವಿರಾಗಿ ಚಿತ್ರಿಸಿದ್ದಾರೆ.
ವಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಆರ್ ಶ್ರೀನಾಗೇಶ್ ಅವರಿಗೆ ಬರವಣಿಗೆ ಹವ್ಯಾಸ. ೧೯೬೯ರಿಂದ ಅವರ ಬರವಣಿಗೆಯ ಸಾಹಸ ಮುಂದುವರಿದಿದೆ. ವಿದ್ಯಾರ್ಥಿಗಳ ಗಣಿತ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು. ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರರಾದ ನಾಗೇಶ್ ವಿಮೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮ ಮತ್ತು ಆಪ್ತ ಸಲಹಾ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1995 ರಿಂದ ನಾಡಿನ ಹಲವೆಡೆ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿರ್ವಹಣಾ ...
READ MORE