" ಹೆಜ್ಜೆಗುರುತು" ಎಂ ಡಿ ಕಟ್ಟಿಮನಿಯವರ ಜೀವನ ಚರಿತ್ರೆಯಾಗಿದ್ದು, ಇದು ಬಿ.ಪಿ.ಕಟ್ಟಿಮನಿಯವರ ಎರಡನೇ ಕೃತಿಯಾಗಿದೆ. ಇಲ್ಲಿ ತಾಯಿಯ ಕಕ್ಕುಲತೆಯ ನಡುವೆ ಭೂಮಿತಾಯಿಯ ಸೇವೆಗೆ ಬದುಕನ್ನು ಮುಡುಪಾಗಿಡುವ ಎಂ ಡಿ ಕಟ್ಟಿಮನಿಯವರ ಸಾರ್ಥಕ ಬದುಕಿನ ಚಿತ್ರಣ ಅನಾವರಣಗೊಂಡಿದೆ. ಸೈನಿಕ ವೃತ್ತಿಬದುಕಿನ ದಿನಗಳು, ಕೌಟುಂಬಿಕ ಬದುಕು, ಜಬಲ್ಪುರ ತರಬೇತಿ,ಸಿಲುಗುಡಿ,ದೆಹಲಿ, ಜಮ್ಮು ಮತ್ತು ಕಾಶ್ಮೀರ ದಲ್ಲಿ ಕಾರ್ಯನಿರ್ವಹಿಸುವ ಆ ದಿನಗಳು, ಕೊನೆಯದಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಘಟನೆಗಳನ್ನು ಅಂದವಾಗಿ ಕಟ್ಟಿಕೊಟ್ಟಿದ್ದಾರೆ .
ಬಿ. ಪಿ. ಕಟ್ಟಿಮನಿ ಅವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ(ಜನನ: 21-07-1992) ಗ್ರಾಮದವರು. ತಂದೆ ಪರಪ್ಪ ಕಟ್ಟೀಮನಿ, ತಾಯಿ ಕಾಂತಮ್ಮ. ಎಂ.ಎಸ್.ಸಿ ಹಾಗೂ ಬಿ.ಎಡ್ ಪದವೀಧರರು. ರಾಯಚೂರು ಜಿಲ್ಲೆಯ ಸಿಂಧನೂರಿನ ಸರಕಾರಿ ಪದವಿ ಮಹಾವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕರು. ಸದ್ಯ ಅವರು ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ನೀನ್ಯಾರ..? (ಕವನ ಸಂಕಲನ-2020) ಎಂಬುದು ಇವರ ಮೊದಲ ಕೃತಿ. ...
READ MORE