ಖ್ಯಾತ ಲೇಖಕಿ ನೇಮಿಚಂದ್ರ ಅವರ ಕೃತಿ -ಬದುಕು ಬದಲಿಸಿದ ಭಾವೇಶ್ ಭಾಟಿಯಾ. ಅಂಧ ಉದ್ಯೋಗ ಜನಕನ ಸಾಹಸಗಾಥೆ ಎಂಬುದು ಈ ಕೃತಿಯ ಉಪಶೀರ್ಷಿಕೆಯಾಗಿ ಓದುಗರ ಗಮನ ಸೆಳೆಯುತ್ತದೆ. ಭಾವೇಶ್ ಚಂದುಭಾಯ್ ಭಾಟಿಯಾ ಅವರು ಡಾ. ಭಾವೇಶ್ ಭಾಟಿಯಾ’ ಎಂದೇ ಪ್ರಸಿದ್ಧಿ. ಸನ್ ರೈಸ್ ಕ್ಯಾಂಡಲ್ಸ್ ಎಂಬ ಸಂಸ್ಥೆ ಸ್ಥಾಪಿಸುವ ಮೂಲಕ ಅಂಧರ ಬಾಳಿಗೆ ಬೆಳಕಾದವರು. ತಾವು ಅಂಧರಿದ್ದೂ ಇತರರಿಗೆ ಉದ್ಯೋಗಗಳ ಅವಕಾಶವನ್ನು ಸೃಷ್ಟಿಸಿದವರು. 50 ವರ್ಷದ ಭಾವೇಶ್ ಭಾಟಿಯಾ ಅವರಿಗೆ ರಾಷ್ಟ್ರಾಧ್ಯಕ್ಷರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮಹಾರಾಷ್ಟ್ರದ ಮಹಾಬಲೇಶ್ವರ ಮೂಲದ ಡಾ. ಭಾವೇಶ್ ಭಾಟಿಯಾ, ಅಂಧರಿಂದಲೇ ಮೇಣದ ಬತ್ತಿಗಳನ್ನು ತಯಾರಿಸಿ, ಅದರ ಆದಾಯದಿಂದ ಸಂಸ್ಥೆ ನಡೆಸುವುದು ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಅವರ ಮನೋಸ್ಥೈರ್ಯದ ಬದುಕನ್ನು ಕಟ್ಟಿಕೊಡುವ ಕೃತಿ ಇದು.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE