ಕರ್ನಾಟಕದಲ್ಲಿ ಶಿಲ್ಪಕಲೆಗಾಗಿ ದುಡಿದವರ ಬಗ್ಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಶಿಲ್ಪಕಲಾವಿದರ ಮಾಲೆಯನ್ನು ಹೊರತಂದಿತು. ಅದರಲ್ಲಿನ ಸರಣಿ ಪುಸ್ತಕಮಾಲೆಯಲ್ಲಿ ಒಂದಾದ”ಕೆ. ಶಾಮರಾಯಾಚಾರ್ಯ’’ ಕುರಿತಾದ ಪುಸ್ತಕವನ್ನು ಲೇಖಕರಾದ ಕಾ. ವಾ. ಆಚಾರ್ಯ ಶಿರ್ವ ಅವರು ಪ್ರಕಟಿಸಿದ್ದಾರೆ.
ಜಕಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತಶಿಲ್ಪಿ, ಕಾರ್ಕಳದ ವಿಜಯಶಿಲ್ಪ ಶಾಲೆಯ ಸ್ಥಾಪಕರೂ, , ಶಿಲ್ಪಾಚಾರ್ಯರಾದ ಕೆ. ಶಾಮರಾಯಾಚಾರ್ಯರ ಬಾಲ್ಯ, ಸಾಧನೆ, ಪ್ರತಿಭೆಯ ವಿಕಾಸ, ಶಿಲ್ಪಶಾಸ್ತ್ರದ ಅಧ್ಯಯನ , ಅವರ ಶಿಷ್ಯ ಬಳಗ, ಶಿಲ್ಪ ನಿರ್ಮಾಣ, ಸಾಂಸಾರಿಕ ಜೀವನ, ಶಿಲ್ಪಶಾಸ್ತ್ರದ ಬಗೆಗಿನ ಪಾಂಡಿತ್ಯ, ಗೌರವ ಪ್ರಶಸ್ತಿಗಳನ್ನು ಸ್ವೀಕರಿಸಿದ ಅನೇಕ ಮಾಹಿತಿಗಳನ್ನು ಈ ಪುಸ್ತಕ ಒಳಗೊಂಡಿದೆ.
ಕಾ.ವಾ. ಆಚಾರ್ಯ ಶಿರ್ವ ಇವರು ಉಡುಪಿ ತಾಲ್ಲೂಕಿನ ಶಿರ್ವದ ಹಿಂದೂ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುಮಾರು ನಲ್ಪತು ವರ್ಷ ಚಿತ್ರಕಲಾಧ್ಯಾಪಕರಾಗಿದ್ದು, ಕಾಲೇಜಿನ ಸರ್ವಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳ ನೇತೃತ್ವವನ್ನು ವಹಿಸಿಕೊಂಡಿದ್ದವರು. ಇವರ ಹುಟ್ಟೂರು ಕಾಸರಗೋಡು, ತೀರ್ಥರೂಪರು ಶಿಲ್ಪಿವಾಸ್ತುಶಿಲ್ಪಿ ಅಪ್ಪಣ್ಣಾಚಾರ್ಯರು, ಮಾತೃಶ್ರೀ ಜನಪದ ಹಾಡುಗಾರ್ತಿ ಶ್ರೀಮತಿ ಲಕ್ಷ್ಮಿ ಕಾಸರಗೋಡು ಬೋರ್ಡ್ ಹೈಸ್ಕೂಲಲ್ಲಿ ಶಿಕ್ಷಣ ಪಡೆದವರು. ಕಲಾವಿದ, ಕಲಾಗುರು ಕೆ.ವಿ. ನೋಂಡರು ಇವರ ಗುರುಗಳು, ವಿವಿಧ ಮಾಧ್ಯಮಗಳಲ್ಲಿ ತರಬೇತಿ ನೀಡಿದ ಹಿರಿಯ ಚೇತನ. 'ಕಾ.ವಾ.' ಇವರು ನಿವೃತ್ತರಾದಾಗ ಸಾರ್ವಜನಿಕರು, ಹಳೆ ವಿದ್ಯಾರ್ಥಿಗಳು (ಹಗಲು-ರಾತ್ರಿ) ಇಡೀ ಒಂದು ದಿನದ ಅದ್ದೂರಿ ...
READ MORE