’ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್’ ಕೃತಿಯು ವಸಂತಕುಮಾರ್ ಉಡುಪಿ ಅವರು ಬರೆದಿರುವ ‘ಹಿರಿಯಡ್ಕ ಗೋಪಾಲ ರಾವ್’ ಅವರ ಏಕವ್ಯಕ್ತಿ ಬದುಕಿನ ಚಿತ್ರಣ ಹಾಗೂ ಸಾಧನೆಗಳ ಕುರಿತ ಕೃತಿಯಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ, ಮದ್ದಳೆಗಾರರಾಗಿ, ಚೆಂಡೆವಾದಕರಾಗಿ, ಪಾತ್ರಧಾರಿಗಳಾಗಿ ಒಂದೊಂದು ವಿಷಯದಲ್ಲಿ ಕೆಲವಾರು ಮಂದಿ ಸಾಧಕರೆನಿಸಿ ಕೊಂಡಿದ್ದಾರೆ. ಹೀಗೆ ಪ್ರಸಿದ್ಧರಾದ ಹಲವಾರು ಮಂದಿ ಕಲಾವಿದರಲ್ಲಿ ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾವ್ ಅವರೂ ಒಬ್ಬರು. 1936ರಿಂದಲೂ ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಮದ್ದಳೆಗಾರರಾಗಿ ನೂರಾರು ಮಂದಿ ಹಿರಿಯ, ಕಿರಿಯ ಕಲಾವಿದರನ್ನು ರಂಗದ ಮೇಲೆ ಕುಣಿಸಿದ; ನೂರಾರು ಮಂದಿಗೆ ಯಕ್ಷಗಾನದ ನೃತ್ಯಾಭ್ಯಾಸವನ್ನು ಮಾಡಿಸಿ, ಕಲಾವಿದರನ್ನಾಗಿ ರೂಪಿಸಿದ; ದೇಶದ ಉದ್ದಗಲಕ್ಕೆ ಮಾತ್ರವಲ್ಲದೆ ವಿದೇಶಗಳಿಗೂ ಹೋಗಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿ, ತಮ್ಮ ಮದ್ದಳೆಯ ನಾದಮಾಧುರ್ಯದಿಂದ ವಿದೇಶಿಗರನ್ನು ತಲೆದೂಗುವಂತೆ ಮಾಡಿದ, ವಿದೇಶಿಗರಿಗೂ ಯಕ್ಷಗಾನದ ನೃತ್ಯವನ್ನು ಕಲಿಸಿ ಒಳ್ಳೆಯ ಕಲಾವಿದರನ್ನಾಗಿ ರೂಪುಗೊಳಿಸಿದ ಶಿವರಾಮ ಕಾರಂತರ ಗರಡಿಯಲ್ಲಿದ್ದು ಅವರಿಂದ ಯಕ್ಷಗಾನದಲ್ಲಿ ಹೊಸತನವನ್ನು ಕಂಡುಕೊಂಡು ಕಾರ್ಯರೂಪಕ್ಕಿಳಿಸಿದ, ಬಡಗುತಿಟ್ಟು ಯಕ್ಷಗಾನದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಬಲ್ಲ: ಬಡಗುತಿಟ್ಟಿನ ಪರಂಪರೆಯ ವಿವಿಧ ಹಂತಗಳನ್ನು, ಬದಲಾವಣೆಗಳನ್ನು, ವಿವಿಧ ಪ್ರಯೋಗಗಳನ್ನು ಕರತಲಾಮಲಕ ಮಾಡಿಕೊಂಡಿರುವ ಹಿರಿಯಡ್ಕ ಗೋಪಾಲ ರಾವ್ ಬಡಗುತಿಟ್ಟು ಯಕ್ಷಗಾನದ ಹಿಮ್ಮೇಳದ ನುಡಿಗತಿಯನ್ನು ಬಲ್ಲ ಸಜ್ಜನಿಕೆಯ ವಿದ್ವಾಂಸರೆಂದು ಈ ಕೃತಿಯ ಮೂಲಕ ಅರಿತುಕೊಳ್ಳಬಹುದು.
ರಂಗಪ್ರವೇಶದ ಕುರಿತು ಅವರಿಗಿದ್ದ ಒಲವನ್ನು ಬಿಚ್ಚಿಡುವ ಲೇಖಕಿ ಶೇಷಗಿರಿರಾಯರ ಮನೆಯಲ್ಲಿ ಮದ್ದಳೆ, ನಾಟ್ಯಗಳಲ್ಲಿ ತರಬೇತಿ ಪಡೆಯುತ್ತಿದ್ದ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕೆಂಬ ಹಂಬಲವುಂಟಾಗಿ, ಒಂದು ತಂಡವನ್ನು ಕಟ್ಟಿಕೊಂಡು ಹಿರಿಯಡ್ಕದಲ್ಲಿಯೇ ಬಯಲಾಟವನ್ನು ಏರ್ಪಡಿಸಬೇಕೆಂಬುದನ್ನು ತೀರ್ಮಾನಿಸಿದ್ದರು ಎನ್ನುವ ವಿಚಾರವು ಇಲ್ಲಿ ಪ್ರಸ್ತುತವಾಗಿದೆ. ಮದ್ದಳೆಯೊಂದಿಗೆ ಅವರಿಗಿದ್ದ ಒಡನಾಟ, ಮೇಳಗಳ ಮದ್ದಳೆಗಾರನಾಗಿ ತಿರುಗಾಟ, ಹರಿಕಥೆಗೆ ತಬ್ಲಾ ವಾದನ, ಈ ಎಲ್ಲಾ ವಿಚಾರಗಳನ್ನು ಲೇಖಕಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಲೇಖಕ ಡಾ. ವಸಂತ ಕುಮಾರ ಅವರು ಉಡುಪಿ ಜಿಲ್ಲೆಯ ಕಾರ್ಕಳದವರು. ಸದ್ಯ ಉಡುಪಿಯಲ್ಲಿ ವಾಸ. ಬಿ.ಎ. (1998), ಎಂ.ಎ. (1990) ಮತ್ತು ‘ಕವಿಸಾಳ್ವನ ರಸ ರತ್ನಾಕರ: ಒಂದು ಅಧ್ಯಯನ’ ವಿಷಯವಾಗಿ ಎಂ.ಫಿಲ್ (1991) ಹಾಗೂ `ರನ್ನನ ಕೃತಿಗಳಲ್ಲಿ ಕಾವ್ಯತತ್ವ ' (2005) ವಿಷಯವಾಗಿ ಪಿಎಚ್ ಡಿ ಪಡೆದರು. ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು (1992-93), ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು (1993-95), ಎರ್ನಾಕುಲಂ ನಲ್ಲಿಯ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿ.ವಿ. (1995-97) ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು (1997 ಅಕ್ಟೋಬರ್ ವರೆಗೆ), ನಂತರ ಉಡುಪಿಯ ...
READ MORE