‘ಬಾಳಿಗೆ ಬೆಳಕಾದ ಎಸ್.ಆರ್. ಹೆಗಡೆ’ ಕೃತಿಯು ಜಿ.ಎಸ್. ಭಟ್ಟ ಅವರ ಪ್ರಧಾನ ಸಂಪಾದಕತ್ವದ ಕೃತಿಯಾಗಿದ್ದು, ಎಸ್.ಡಿ. ಹೆಗಡೆ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಎಲ್.ಆರ್. ಹೆಗಡೆ ಅವರ ಜೀವನ ಕುರಿತ ಹಲವಾರು ವಿಚಾರಗಳನ್ನು ಇಲ್ಲಿ ಕಾಣಬಹುದು. ಚೇತನಾ ಸಾಹಿತ್ಯ ಸಾಧಕರ ಮಾಲೆಯಡಿಯಲ್ಲಿ ಈ ಕೃತಿಯು ಪ್ರಕಟಗೊಂಡಿದೆ. ಅವರ ಸಾಹಿತ್ಯದ ವಿಚಾರಗಳು, ಬದುಕಿನುದ್ದಕ್ಕೂ ಅನುಸರಿಸಿದ ರೀತಿ ನೀತಿಗಳು ಇವೆಲ್ಲವನ್ನೂ ಕೃತಿಯಲ್ಲಿ ಕಾಣಬಹುದು.
ಹಿರಿಯ ಲೇಖಕ ಜಿ.ಎಸ್ ಭಟ್ (ಮೈಸೂರು). 1943, ಮೇ 6 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನನ. ತಂದೆ ಸುಬ್ಬರಾಯ ಭಟ್, ತಾಯಿ ಸರಸ್ವತಿ. ಕಲಾವಿದರಾಗಿರುವ ಜಿ.ಎಸ್.ಭಟ್ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸಾಹಿತಿ ಪ್ರೊ.ದೇಜಗೌ ಅವರಿಂದ ಪ್ರೇರಿತರಾಗಿ 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗಕ್ಕೆ ವಿಶ್ವಕೋಶದ ಸಂಪಾದಕರಾಗಿ ಸೇರಿದರು. ಅಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯದೊಂದಿಗೆ 33 ವರ್ಷಗಳ ಅವಧಿಯಲ್ಲಿ ವಿಶ್ವಕೋಶದ 14 ಸಂಪುಟಗಳನ್ನು ಹೊರತಂದ ಕೀರ್ತಿಯು ಅವರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರವೂ ಭಟ್ ಕನ್ನಡ ವಿಶ್ವಕೋಶದ ಕೆಲಸವನ್ನು ಮುಂದುವರೆಸಿದರು. ಯಕ್ಷಗಾನ ಮತ್ತು ಬಯಲಾಟ ಸೇರಿದಂತೆ 75 ...
READ MORE