ಲೇಖ-ಲೋಕ 7 ಕೃತಿಯು ಲೇಖಕಿಯರ ಆತ್ಮಕಥನವಾಗಿದ್ದು, ಪುಸ್ತಕದ ಪ್ರಧಾನ ಸಂಪಾದಕರಾಗಿ ವನಮಾಲ ಸಂಪನ್ನಕುಮಾರ ಮತ್ತು ಸಂಪಾದಕಿಯಾಗಿ ಜಿ.ವಿ. ನಿರ್ಮಲಾ ಅವರು ಈ ಕೃತಿಯನ್ನು ಹೊರತಂದಿದ್ದಾರೆ. ಕರ್ನಾಟಕದ ಲೇಖಕಿಯರ ಸಂಘದ ಅನೇಕ ಅರ್ಥಪೂರ್ಣ ಕಾರ್ಯಗಳಲ್ಲಿ ಲೇಖಕಿಯರ ಆತ್ಮ ಕಥಾನಕಗಳ ನಿರೂಪಣೆಯ ಲೇಖ-ಲೋಕ ಕಾರ್ಯಕ್ರಮವೂ ಒಂದು. ಅತ್ಯಂತ ವಿಶಿಷ್ಟವಾದ ಈ ಆತ್ಮಕಥಾನಕಗಳು ಸಾಹಿತ್ಯ ಲೋಕವನ್ನು ತನ್ನೆಡೆ ಸೆಳೆದಿದೆ. ಕೃತಿಯ ಪರಿವಿಡಿಯಲ್ಲಿ ಡಾ. ಪದ್ಮಾಶೇಖರ್, ಬಾ.ಹ. ರಮಾಕುಮಾರಿ, ಡಾ. ಬಿ.ಸಿ. ಶೈಲಾ ನಾಗರಾಜ್, ಡಾ. ಸುಮಾ ದ್ವಾರಕಾನಾಥ್, ಜಿ.ವಿ. ನಿರ್ಮಲಾ, ಡಾ. ಗಿರಿಜಾ ಶಾಸ್ತ್ರಿ, ಡಾ. ವೀಣಾ ಭಟ್ ಅವರ ಆತ್ಮಕಥನಗಳು ಈ ಕೃತಿಯಲ್ಲಿವೆ. ಕರ್ನಾಟಕದ ಲೇಖಕಿಯರ ಸಂಘವು ಲೇಖಕಿಯರ ಆತ್ಮಕಥೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ, ಲೇಖಕಿಯರ ಜೀವನದ ಸಂಘರ್ಷ, ಸಾಧನೆ, ಆಯಾಯ ಕಾಲದ ಸಾಂಸ್ಕೃತಿಕ ಬದುಕಿನ ಪರಿಚಯ ಓದುಗರಿಗೆ ಈ ಪುಸ್ತಕದ ಮುಖೇನ ಸಿಗುವಂತಾಗಿದೆ.
ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯಕ್ಕೆ ಕೊಡುಗೆ ನೀಡುತ್ತಾ ಬಂದವರು ವನಮಾಲಾ ಸಂಪನ್ನಕುಮಾರ್. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. 1964 ಡಿಸೆಂಬರ್ 15 ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ತಂದೆ ಮಹಾಲಿಂಗ ಶೆಟ್ಟಿ, ತಾಯಿ ಸಂಜೀವಿ ಎಂ. ಶೆಟ್ಟಿ. ವಾಸಂತಿ ಪಡುಕೋಣೆ (ಜೀವನ ಚರಿತ್ರೆ) (ಸಂಪಾದನೆ), ಗರಿಕೆ (ಉದಯೋನ್ಮುಖರ ಕವಿತೆಗಳು) ಪ್ರಕಟಗೊಂಡಿವೆ. ನಮ್ಮ ಬದುಕಿನ ಪುಟಗಳು, ನಮ್ಮ ಬದುಕು ನಮ್ಮ ಬರಹ (ಲೇಖಕಿಯರ ಆತ್ಮ ಕಥಾನಕಗಳು) ಕೃತಿಗಳನ್ನು ರಚಿಸಿದ್ದಾರೆ. ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷೆ ಹುದ್ದೆ, ಬೆಂಗಳೂರು ಬಂಟರ ಸಂಘದ ಸ್ನೇಹ ಚಿಂತನ ಮಾಸಿಕದ ಸಂಪಾದಕ ಮಂಡಳಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ...
READ MORE