ಅವತಾರ

Author : ಸಿದ್ಧರಾಮ ಉಪ್ಪಿನ್

Pages 221

₹ 200.00




Year of Publication: 2022
Published by: ಬೆರಗು ಪ್ರಕಾಶನ
Address: ಕಡಣಿ ಗ್ರಾಮ, ಆಲಮೇಲ ತಾಲೂಕು, ವಿಜಯಪುರ ಜಿಲ್ಲೆ
Phone: 7795341335

Synopsys

`ಹವಾ ಮಲ್ಲಿನಾಥ ಮಹಾರಾಜ' ಎಂದೇ ಖ್ಯಾತಿಯ ಇವರ ಕುರಿತು ಲೇಖಕ ಸಿದ್ಧರಾಮ ಉಪ್ಪಿನ್ ಅವರು ‘ಅವತಾರ’ ಶೀರ್ಷಿಕೆಯಡಿ ರಚಿಸಿದ ಕೃತಿ. ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿ ಗ್ರಾಮದವರು. ಇವರ ಮೂಲ ಹೆಸರು-ಮಲ್ಲಯ್ಯ. ಅದೇ ತಾಲೂಕಿನ ಅಮರ್ಜಾ ಹಳ್ಳಕೊಳ್ಳದ ಊರು ಕೋರಳ್ಳಿಯಲ್ಲಿ 5ನೇ ತರಗತಿಯವರೆಗೆ ಓದಿದ್ದು, ನಂತರ ಅಧ್ಯಾತ್ಮಿಕತೆಯ ಸೆಳೆತಕ್ಕೆ ಒಳಗಾಗಿ ದೇಶ ಸುತ್ತಾಟ, ವಿವಿಧಡೆ ಮಠಗಳ ಸ್ಥಾಪನೆ. ಈಗ ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ವ್ಯಕ್ತಿತ್ವ. ಇವರ ಬದುಕು- ಚಿಂತನೆಗಳನ್ನು ಜಿಜ್ಞಾಸೆಗೆ ಒಳಡಿಸುವ ಮೂಲಕ ಹವಾ ಮಲ್ಲಿನಾಥರ ವ್ಯಕ್ತಿತ್ವದ ಛಾಪು ಮೂಡಿಸುವ ಕೃತಿ ಇದು.

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ರಾಜಶೇಖರ ಮಠಪತಿ (ರಾಗಂ) ‘ಶ್ರದ್ಧೆಯನ್ನು ಕೇಂದ್ರವಾಗಿಸಿಕೊಂಡು ಬರೆದ ಬರಹವಿದು. ಇಲ್ಲಿ ವ್ಯಕ್ತಿ ಅಮುಖ್ಯ. ಗುರು, ಶಿಷ್ಯ, ಪೀಠ, ಪವಾಡಗಳು ಅಪ್ರಸ್ತುತ. ಈ ಕೃತಿಯು ಕೇವಲ ಧ್ಯಾನದ ಚಿಂತನೆ ಅಷ್ಟೇ. ಅದಕ್ಕೆ ಯಾವುದರ ನಿರೀಕ್ಷೆಯೂ ಇಲ್ಲ. ‘ನೀನು ಅಕ್ಷಯ’ ಎಂದು ಅರಿವಿಗೆ ತರುವಷ್ಟು ಅದರ ಗುರಿ’ ಎಂದು ಕೃತಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. .

About the Author

ಸಿದ್ಧರಾಮ ಉಪ್ಪಿನ್
(06 June 1952)

ಹಿರಿಯ ಲೇಖಕ ಸಿದ್ಧರಾಮ ಉಪ್ಪಿನ ಮೂಲತಃ ಅವಿಭಜಿತ ವಿಜಯಪುರ ಜಿಲ್ಲೆಯ ಆಲಮೇಲದವರು.ಈಗ ಆಲಮೇಲವೇ ತಾಲೂಕು ಕೇಂದ್ರವಾಗಿದೆ.  ವೃತ್ತಿಯಿಂದ ಕೃಷಿಕರು. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರ. ಬಿ.ಕಾಂ ಶಿಕ್ಷಣವನ್ನು ಹುಬ್ಬಳ್ಳಿಯ ಜೆ.ಜಿ ವಾಣಿಜ್ಯ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. 1996 ರಿಂದ 1999 ರವರೆಗೆ ಕನ್ನಡಪ್ರಭ ತಾಲ್ಲೂಕು ವರದಿಗಾರರಾಗಿ, ಶ್ರೀ ದತ್ತ ನಾಟ್ಯ ವಸ್ತು ಭಂಡಾರದ ಸಂಚಾಲಕರಾಗಿ, ರಂಗ ಪರಿಕರ ಪ್ರಕಾಶನದ ಸಂಚಾಲಕರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1996 ರಿಂದ 1999 ರವರೆಗೆ ಶಹಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ,  1998 ರಿಂದ 2001 ರವರೆಗೆ ತಾಲೂಕಿನ ಕನ್ನಡ ...

READ MORE

Related Books