ಜೀ.ಶಂ. ಪರಮಶಿವಯ್ಯ

Author : ಡಿ.ಕೆ.ರಾಜೇಂದ್ರ

Pages 42

₹ 15.00




Year of Publication: 2009
Published by: ಕರ್ನಾಟಕ ಜಾನಪದ ಪರಿಷತ್ತು
Address: ಜಲದರ್ಶಿನಿ ಲೇಔಟ್‌, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ಹೊಸ ಬಿ.ಇ.ಎಲ್. ರಸ್ತೆ, ಬೆಂಗಳೂರು

Synopsys

ಜೀ.ಶಂ. ಪರಮಶಿವಯ್ಯನವರು ಕನ್ನಡ ಜಾನಪದದ ಸಂದರ್ಭದಲ್ಲಿ ಮರೆಯದ ಹೆಸರು. ಕನ್ನಡ ಜನಪದ ವೃತ್ತಿ ಗಾಯಕರ ಶೋಧನೆ, ಪರಿಚಯ ಅವರ ದೊಡ್ಡ ಕೊಡುಗೆ. ಜಾನಪದ ಕ್ಷೇತ್ರಕಾರ್ಯ ಹಾಗೂ ಅಧ್ಯಯನದಲ್ಲಿ ಅವರದು ಮಾದರಿ ಮಾರ್ಗ. ಕನ್ನಡ ಜಾನಪದದ ಮೊದಲ ಪ್ರಾಧ್ಯಾಪಕರು, ಪಾಶ್ಚಾತ್ಯ ಜಾನಪದ ಅರಿವನ್ನು ಕನ್ನಡಕ್ಕೆ ಪರಿಚಯಿಸಿದವರು, ಜಾನಪದ ಕ್ಷೇತ್ರದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಸಾಹಿತಿ ಡಿ.ಕೆ. ರಾಜೇಂದ್ರ ಅವರು ಪ್ರಸ್ತುತ ಕೃತಿಯಲ್ಲಿ ಪರಮಶಿವಯ್ಯ ಅವರ ಬದುಕು-ಸಾಧನೆ ಕುರಿತು ಸಂಪುರ್ಣ ಮಾಹಿತಿಯನ್ನು ಒದಗಿಸಿದ್ದಾರೆ.

About the Author

ಡಿ.ಕೆ.ರಾಜೇಂದ್ರ

ಜನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಿ.ಕೆ. ರಾಜೇಂದ್ರ ಅವರು ಶಿಷ್ಟ ಸಾಹಿತ್ಯದಲ್ಲಿಯೂ ಗಮನಾರ್ಹ ಕೆಲಸ ಮಾಡಿದವರು. ರಾಜೇಂದ್ರ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದವರು. ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣವನ್ನು ದಂಡಿನ ಶಿವರದಲ್ಲಿ ಪಡೆದ ಅವರು ನಂತರ ಅರಕಲಗೂಡು ಮತ್ತು ಶಿರಾ ಪ್ರೌಢಶಾಲೆಗಳಲ್ಲಿ  ಪಡೆದರು. ಹಾಸನದ ಪ್ರಥಮ ದರ್ಜೆ ಕಾಲೇಜಿನಿಂದ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆರು. ಅವರು ಸಲ್ಲಿಸಿದ ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಕುರಿತ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ. ನೀಡಿದೆ. ಕನ್ನಡ ...

READ MORE

Related Books