ಲೇಖಕಿ ದಾಕ್ಷಾಯಿಣಿ ನಿತ್ಯಾನಂದ ಮಠ ಬಳಬಟ್ಟಿ ಅವರು ರಚಿಸಿದ ಕೃತಿ-"ಮಹಾಶರಣ ". ಶರಣ ಹರಳಯ್ಯನವರ ಜೀವನ ಚರಿತ್ರೆ ಒಳಗೊಂಡಿದ್ದು, ಹರಳಯ್ಯನವರ ಬದುಕಿನ ಘಟನೆಗಳನ್ನು ಸಂಗ್ರಹಿಸಿದೆ. ಶಿವಶರಣ ಹರಳಯ್ಯನವರ ಭಕ್ತಿ, ಬಸವಣ್ಣನವರ ಶಕ್ತಿ,ಕಲ್ಯಾಣಮ್ಮ ನವರ ಶ್ರದ್ಧೆ,ಮಧುವರಸರ ತ್ಯಾಗ, ಶೀಲವಂತರ ಲಾವಣ್ಯವತಿ ವೈರಾಗ್ಯ ಎಲ್ಲವೂ ಈ ಕೃತಿಯಲ್ಲಿ ಮಾರ್ಮಿಕವಾಗಿ,ತಾರ್ಕಿಕವಾಗಿ ವಿವರಿಸಲ್ಪಟ್ಟಿದೆ.
ಸಮಾನತೆಯ ವಿಚಾರಕ್ರಾಂತಿ ರಕ್ತ ಕ್ರಾಂತಿಯಾಗಿ ಎಲ್ಲಾ ಶಿವಶರಣರ ಬಲಿಪಡೆದು ಇತಿಹಾಸದ ಪುಟದಲ್ಲಿ ಒಂದು ಕರಾಳ ಕಹಿ ನೆನಪಾಗಿ ಉಳಿದಿರುವ ದಾಖಲೆ ಮೇಲೆ ಈ ಗ್ರಂಥವು ಬೆಳಕು ಚೆಲ್ಲುತ್ತದೆ. ಅಲ್ಲದೆ, ಹರಳಯ್ಯ ಮಧುವರಸರ ಪ್ರಥಮ ಭೇಟಿ ಅವರ ಗರ್ವಭಂಗ, ಲಾವಣ್ಯ ವತಿಯಿಂದ ಪಾಪ ಪರಿಹಾರ ಸೃಷ್ಟಿಕರ್ತನ ಸ್ವರ್ಗ ಲೋಕದನುಭಾವ ಭಾವನೆಗಳಾಗಿವೆ. ಸಮಾನತೆಗಾಗಿ ಅಂತರ್ಜಾತಿ ವಿವಾಹ, ವಿವಾಹದ ಬಗ್ಗೆ ಅನುಭವಮಂಟಪದಲ್ಲಿ ಪ್ರಸ್ತಾಪ, ಅಂಧಕಾರ ಅಳಿಸಿ ಜ್ಯೋತಿ ಅರಳಿ ಸಿಗದಂತಾಗಿದೆ. ದುಃಖಕರವಾದ ದೃಶ್ಯಗಳು ಮನೋಜ್ಞವಾಗಿ "ಮರಣವೇ ಮಹಾನವಮಿ "ಎಂದು ಮೆಚ್ಚುಗೆ ಪಡುವಂಥದ್ದು." ಶರಣು"'ಶರಣು ಶರಣಾರ್ಥಿ" ಅನ್ನುವುದರಲ್ಲಿ ಅವರ ಮನೋ ಧಾರ್ಮಿಕ- ಬಾಂಧವ್ಯ ಜಾತಿ ಮೀರಿದ ಬಾಂಧವ್ಯ ಮನ ಕಲುಕಿಸು ವಂಥದ್ದು.ಭಾವನಾತ್ಮಕ ಬೆಸುಗೆ, ಶರಣರ ಉತ್ತಮ ವಿಚಾರಗಳು ಇಬ್ಬರಲ್ಲಿ ಶರಣಧರ್ಮ, ಮನೋಧರ್ಮ,ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಧರ್ಮ, ಹೆಚ್ಚಾಗಿ ಜಾತಿಗಳಲ್ಲಿ ಮೇಲು- ಕೀಳುಗಳಿಲ್ಲ ಎಂಬ ಗುಣಧರ್ಮ ಶರಣರ ಜೀವನದಲ್ಲಿ ನಡೆದ ಸನ್ನಿವೇಶದಿಂದ ಎಂದು ಕಾಣುತ್ತದೆ.
ಜೊತೆಗೆ ಹರಳಯ್ಯನವರು ತಮ್ಮ ಚರ್ಮದಿಂದ ಪವಿತ್ರ ಪಾದುಕೆಗಳನ್ನು ಮಾಡಿ ಪಾದುಕೆಗಳ ಹಿಂಬದಿಯಲ್ಲಿ ತಮ್ಮ ಮತ್ತು ತಮ್ಮ ಧರ್ಮಪತ್ನಿಯ ತೊಡೆಯ ಚರ್ಮದ ತುಣುಕು ಗಳನ್ನು ಸೇರಿಸಿ ಪವಿತ್ರವಾದ ಪಾದುಕೆಗಳನ್ನು ಬಸವಣ್ಣನವರಿಗೆ ಅರ್ಪಿಸಿದ ಘಟನೆ ಒಂದಾದರೆ, ಇನ್ನೊಂದು ಬಸವಣ್ಣನವರ ಸೂಚನೆಯಂತೆ ತಮ್ಮ ಮಗ ಶೀಲವಂತ ನಿಗೆ ಮಧುವರಸರ ಮಗಳ ಜೊತೆ ಮದುವೆ ನೆರವೇರಿಸಿದ್ದು, ಈ ಘಟನೆಯಿಂದಾಗಿ ರಾಜ ಬಿಜ್ಜಳನು ಚಾಡಿಕೋರರ ಮಾತಿಗೆ ಕಿವಿಗೊಟ್ಟು ಹರಳಯ್ಯ ಹಾಗೂ ಮಧುವರಸರ ನ್ನು ಶಿಕ್ಷೆಗೆ ಗುರಿ ಮಾಡಿದ್ದು ಮತ್ತು ಇದರಿಂದಾಗಿ ಕಲ್ಯಾಣಕ್ರಾಂತಿ ಉಂಟಾಗಿದ್ದು. ಹೀಗಾಗಿ ಶಿವಶರಣ ಹರಳಯ್ಯನವರ ವ್ಯಕ್ತಿತ್ವ ಮಹತ್ವ ಪಡೆಯುತ್ತದೆ. ಎಂಬುದನ್ನು ಮನೋಜ್ಞವಾಗಿ ಕೃತಿಯಲ್ಲಿ ನಿರೂಪಿಸಲಾಗಿದೆ.
ಲೇಖಕ ದಾಕ್ಷಾಯಿಣಿ ನಿತ್ಯಾನಂದ ಮಠ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳಬಟ್ಟಿ ಗ್ರಾಮದವರು. ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು, ಶರಣ ಹರಳಯ್ಯ ಅವರ ಜೀವನ ಚರಿತ್ರೆ (2017) ಕುರಿತು ಮಹಾ ಶರಣ ಎಂಬ ಶೀರ್ಷಿಕೆಯಡಿ ಕೃತಿ ರಚಿಸಿದ್ದಾರೆ. ...
READ MORE