ಸಾಹಿತಿ ಡಿ.ವಿ. ಗುಂಡಪ್ಪನವರು ಗೋಪಾಲಕೃಷ್ಣ ಗೋಖಲೆ ಜೀವನ ಚರಿತ್ರೆ, ಅವರ ಹೋರಾಟದ ಸಾಧನೆಗಳು ಕುರಿತು ಬರೆದ ಕೃತಿ ಇದು. 1915ರಲ್ಲಿ ಮೊದಲ ಮುದ್ರಣವಾಗಿದ್ದು, ಪ್ರಸ್ತುತ ಕೃತಿಯು 7ನೇ ಆವೃತ್ತಿಯಾಗಿದೆ. ಗೋಖಲೆ ಅವರ ಉಪನ್ಯಾಸಗಳು ಸೇರಿವೆ. ಗೋಖಲೆ ಅವರ ಜನ್ಮ, ಜೀವನ ವೃತ್ತಿ, ರಾನಡೆ ಪ್ರಭಾವದಿಂದ ರಂಗ ಪ್ರವೇಶ, ಹೋರಾಟ, ದೇಶ ನಾಯಕತ್ವ, ಯುಕ್ತಿ ಸಂಧಾನ, ಅಷ್ಟಿಷ್ಟು ಸಮಾಧಾನ, ಕಡೆಯ ದಿನಗಳು, ಗುಣಾತಿಶಯಗಳು, ಉಪನ್ಯಾಸಗಳು (ನಮ್ಮ ರಾಜಕೀಯ ಪರಿಸ್ಥಿತಿ, ಸ್ವದೇಶಿ ಸಮಾರಂಭ, ವಿದ್ಯಾರ್ಥಿಗಳಿಗೆ ಹಿತೋಕ್ತಿ, ಅಂತ್ಯ ಜಾತಿಯವರ ಉದ್ಧಾರ, ಮಹಾದೇವ ಗೋವಿಂದ ರಾನಡೆಯವರು ಹೀಗೆ ವಿದ್ವತ್ ಪೂರ್ಣವಾದ 14 ಉಪನ್ಯಾಸಗಳು) ಒಳಗೊಂಡಿವೆ.
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE