ತ್ಯಾಗರಾಜ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಎಸ್. ಕೆ. ರಾಮಚಂದ್ರರಾವ್ ಅವರು ರಚಿಸಿದ್ದಾರೆ. ಸಂಗೀತಮಾಧುರ್ಯದಿಂದ ದೇವರನ್ನು ಒಲಿಸಿಕೊಂಡ, ವಾಲ್ಮೀಕಿ ಮತ್ತು ನಾರದರ ಅವತಾರವೆಂದು ಜನ ನಂಬುವ ನಾದಬ್ರಹ್ಮ; ’ಕರ್ಣಾಟಕ ಸಂಗೀತ’ದ ಆರಾಧ್ಯದೈವ; ಋಷಿತುಲ್ಯರೆಂದು ಖ್ಯಾತಿಗಳಿಸಿದ ಪರಮ ಭಕ್ತಾಗ್ರಣಿ ಎಂದು ತ್ಯಾಗರಾಜ ಅವರನ್ನು ಇಲ್ಲಿ ವರ್ಣಿಸಲಾಗಿದೆ. ಅವರ ಬಾಲ್ಯ ಜೀವನ, ಸಂಗೀತ ಲೋಕದ ಪಯಣ, ಅಚಲ ಭಕ್ತಿ ಹೀಗೆ ಅವರ ಬದುಕಿನ ಪ್ರಮುಖ ಹಂತಗಳನ್ನು ಲೇಖಕರು ಈ ಪುಸ್ತಕದಲ್ಲಿ ಸರಳವಾಗಿ ಚಿತ್ರಿಸಿದ್ದಾರೆ.
ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...
READ MORE