ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತ ಅಪರೂಪದ ಪುಸ್ತಕ ‘ತಾಷ್ಕೆಂಟ್ ಡೈರಿ’. ಒಂದು ಸಾಮಾನ್ಯ ಕುಟುಂಬದಿಂದ ಬಂದು ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್ ವ್ಯಕ್ತಿಯೊಬ್ಬರ ಜೀವನ ಕಥನ. ವ್ಯಕ್ತಿಯೊಬ್ಬ ತನ್ನ ಆದರ್ಶ ಮತ್ತು ಉದಾತ್ತ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಕೊಂಡೊಯ್ಯಬಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಶಾಸ್ತ್ರೀಜಿಯವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆ, ಪ್ರಧಾನ ಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆ, 1965ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನಗಳ ಸಮ್ಮಿಶ್ರಣ ಇಲ್ಲಿದೆ.
ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...
READ MORE