ಜೇನ್ ಗುಡಾಲ್ -45 ವರ್ಷಗಳ ಕಾಲ ಚಿಂಪಾಂಜಿಗಳೊಡನೆ ಕಳೆದು ಅವುಗಳ ಬದುಕಿನ ಬಗ್ಗೆ ಬೇರೂರಿದ್ದ ಮೂಢನಂಬಿಕೆಗಳನ್ನು ನಿವಾರಿಸಿ ಅರಿವನ್ನು ಹೆಚ್ಚಿಸಿದಾಕೆ. ಮನುಷ್ಯರ ವರ್ತನೆಗಿಂತ ಚಿಂಪಾಂಜಿಗಳ ವರ್ತನೆ ಭಿನ್ನವಾಗಿಲ್ಲ. ಅವುಗಳು ಸಹ ಮನುಷ್ಯರ ಹಾಗೆ ಪ್ರೀತಿಸಬಲ್ಲವು ಹಾಗೆ ಕುಟಿಲ ತಂತ್ರಗಳನ್ನು ಹೂಡಬಲ್ಲವು. ಮನುಷ್ಯರ ಹಾಗೆ ಯುದ್ಧ ಮಾಡಿ ಕೊಲ್ಲಬಲ್ಲವು ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದಾಕೆ. ಅವರ ಅಧ್ಯಯನಶೀಲತೆ-ಆಲೋಚನಾ ಕ್ರಮ-ಹೋರಾಟದ ಹಾದಿ-ಏಕಾಗ್ರತೆಯ ಜೀವಮಾನ ಸಾಧನೆ ಕುರಿತು ಸವಿವರವಾಗಿ ತಿಳಿಸಿದ್ದಾರೆ ಲೇಖಕಿ ನೇಮಿಚಂದ್ರ. ಈ ಕೃತಿಯನ್ನು ನಾ.ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE