ಮೂರನೆಯ ಕೃಷ್ಣ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಕಮಲಾ ನಾರಾಯಣ ಸಂಪಳ್ಳಿ ಅವರು ರಚಿಸಿದ್ದಾರೆ. ರಾಷ್ಟ್ರಕೂಟ ಮನೆತನದ ರಾಜ. ಕರ್ನಾಟಕವನ್ನಾಳಿದವನು, ಭಾರತದ ಚರಿತ್ರೆಯಲ್ಲಿ ಶ್ರೇಷ್ಠ ರಾಜರ ಪಂಕ್ತಿಗೆ ಸೇರಿದವನು. ರಣಧೀರ, ಪ್ರಜೆಗಳ ಹಿತವನ್ನೇ ಮುಖ್ಯವಾಗಿ ಭಾವಿಸಿದ ಪ್ರಭು. ಎಲ್ಲ ಧರ್ಮಗಳಿಗೆ ಗೌರವ ತೋರಿದವನು. ವಿದ್ಯಾಭ್ಯಾಸ, ಕಲೆಗಳು ಇವುಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ ಎಂದು ಮೂರನೆಯ ಕೃಷ್ಣನ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಚರಿತ್ರೆಯಲ್ಲಿ ಆಸಕ್ತಿ ಹೊಂದಿದ್ದ ಕಮಲಾ ಸಂಪಳ್ಳಿಯವರು ಉತ್ತಮ ಸಂಶೋಧಕರಾಗಿದ್ದರು. ತಮ್ಮ ಆಸಕ್ತಿಯನ್ನೆ ಆಯ್ಕೆಯನ್ನಾಗಿ ಮಾಡಿಕೊಂಡ ಇವರು ಚರಿತ್ರೆಯಲ್ಲಿ ಎಂ.ಎ ಪದವಿ ಪಡೆದರು. ಕಮಲಾರವರು 1934 ಆಗಸ್ಟ್ 8 ರಂದು ಜನಿಸಿದರು. ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಮೂರನೆಯ ಕೃಷ್ಣ, ವೀರ ಬಂಕೆಯ, ಬೆಂಗಳೂರು ಉತ್ತರ ಇವರ ಕೃತಿಗಳು. ಇವರು 2002 ರಲ್ಲಿ ನಿಧನರಾದರು. ...
READ MORE