ಎಚ್.ಎಸ್. ಸತ್ಯನಾರಾಯಣ ಅವರು ಮಾಸ್ತಿಯವರ ಬದುಕು-ಬರಹವನ್ನು ಪರಿಚಯಿಸುವ ಕೃತಿ ನಗುಮೊಗದ ಅಜ್ಜ ಮಾಸ್ತಿ. ಲೇಖಕರೇ ಕೃತಿಯಲ್ಲಿ ಹೇಳಿರುವಂತೆ ಮಾಸ್ತಿಯವರ ಬದುಕು-ಬರಹವನ್ನು ಪರಿಚಯಿಸುವ ಉದ್ದೇಶದಿಂದ ಈ ಪುಟ್ಟ ಜೀವನಚರಿತ್ರೆಯನ್ನು ಬರೆದಿರುವೆ. ಈ ಕೃತಿಯಿಂದ ಮಾಸ್ತಿಯವರ ಪರಿಚಯ ಭಾಗಶಃ ಮಾತ್ರವಾಗಿದೆ ಎಂಬ ತಿಳಿವಳಿಕೆಯಿದೆ. ಇದನ್ನು ಓದಿದವರಿಗೆ ಅವರ ವ್ಯಕ್ತಿತ್ವವನ್ನು , ಸಾಹಿತ್ಯಕ ವ್ಯಕ್ತಿತ್ವವನ್ನು ಸ್ವಲ್ಪವಾದರೂ ಪರಿಚಯಿಸಿಕೊಳ್ಳುವ ಅವಕಾಶವಾಗುತ್ತದೆಂಬ ಆಶಯ ನನ್ನದು. ಬೆಟ್ಟದಷ್ಟಿರುವ ಅವರ ಸಾಹಿತ್ಯ ಕೃಷಿಯನ್ನು, ಎತ್ತರದ ಅವರ ಬಾಳುವೆಯನ್ನು ಪರಿಚಯಿಸಲು ಎಷ್ಟು ಪುಟಗಳ ಪುಸ್ತಕ ಬರೆದರೂ ಬರೆಯುವುದು ಬೇಕಾದಷ್ಟಿದೆಯೆಂಬ ಕೊರಗು ಉಳಿಯುವಷ್ಟು ದೊಡ್ಡ ಬದುಕು ಮಾಸ್ತಿಯವರದು. ನಮ್ಮ ಮಕ್ಕಳು ಈ ಪುಟ್ಟ ಪುಸ್ತಕವನ್ನೋದಿ ಮಾಸ್ತಿಯವರ ಸಾಹಿತ್ಯದತ್ತ ಮುಖಮಾಡಲಿ, ಈ ಕೃತಿ ಅವರಿಗೆ ಪ್ರೇರಣೆಯಾಗಲಿ ಎಂದಷ್ಟೇ ಆಶಿಸುವೆ ಎಂದಿದ್ದಾರೆ.
ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...
READ MORE