ಸ್ವಾಮಿ ಪುರುಷೋತ್ತಮಾನಂದ ಅವರು ರಚಿಸಿದ ಕೃತಿ-ಶ್ರೀ ಶಾರದಾದೇವಿ ಜೇವನ ಗಂಗಾ. ಶಾರದಾದೇವಿಯು ಶ್ರೀರಾಮಕೃಷ್ಣ ಪರಮಹಂಸರ ಪತ್ನಿ. ಅಧ್ಯಾತ್ಮಕವಾಗಿ ಈ ದಂಪತಿ ಸಾಧಿಸಿದ ಜೀವನ ಯಶಸ್ಸು ಅಪರಿಮಿತ. ಶ್ರೀ ಶಾರದಾದೇವಿಯ ಜೀವನಗಾಥೆಯನ್ನು ವಿವರಿಸಿರುವ ಈ ಕೃತಿಯು ಶಾರದಾದೇವಿಯ ಒಟ್ಟು ಪಾರಮಾರ್ಥಿಕ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಶಾರದಾದೇವಿ ಅವರ ಬಗ್ಗೆ ಇಷ್ಟೊಂದು ಸುದೀರ್ಘವಾಗಿ ರಚಿಸಿದ ಪುಸ್ತಕ ಮತ್ತೊಂದಿಲ್ಲ ಎಂಬ ಹೆಗ್ಗಳಿಕೆ ಈ ಕೃತಿಗೆ ಇದೆ.
ಖ್ಯಾತ ಚಿಂತಕ ಸ್ವಾಮಿ ಪುರುಷೋತ್ತಮಾನಂದರುದ.ಕ. ಜಿಲ್ಲೆಯ ಸಾಲಿಗ್ರಾಮ ಬಳಿಯ ಮೂಡಹಾಡು ಗ್ರಾಮದವರು. ಮೂಲ ಹೆಸರು ರಾಮಚಂದ್ರ ಬಾಯಿರಿ. ಮಲ್ಪೆಯಲ್ಲಿ ಮೆಟ್ರಿಕುಲೇಷನ್ ಮುಗಿಸಿದರು. ನಂತರ ಬೆಂಗಳೂರಿನ ರಾಮಕೃಷ್ಣಾಶ್ರಮ ಪ್ರವೇಶಿಸಿದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು. ನಂತರ ಪ್ರವಚನಕಾರರಾಗಿ ಮುಂದುವರಿದರು. “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.ಎನ್ನುವುದು ಅವರ ಪ್ರವಚನದ ಜೀವಾಳವಾಗಿತ್ತು. ಕೊಡಗು, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ಶ್ರೀರಾಮಕೃಷ್ಣಾಶ್ರಮದ ಶಾಖೆಗಳನ್ನು ಆರಂಭಿಸಿದರು. ಅವರು ಉತ್ತಮ ಹಾಡುಗಾರರೂ ಆಗಿದ್ದು, ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಕೃತಿಗಳು : ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ...
READ MORE