ಭಾರತೀಯ ಶಾಸ್ತ್ರೀಯ ನೃತ್ಯಪಟು, ನೃತ್ಯ ಸಂಯೋಜಕಿ ಹಾಗೂ ಪ್ರಾಧ್ಯಾಪಕಿ ಮೃಣಾಲಿನಿ ಸಾರಾಭಾಯಿ. ಸುಮಾರು ಹದಿನೆಂಟು ಸಾವಿರ ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗೂ ಕಥಕ್ಕಳಿ ನೃತ್ಯದಲ್ಲಿ ತರಬೇತಿ ನೀಡಿದ್ದಾರೆ.
ಕೇರಳ ಮೂಲದ ನ್ಯಾಯವಾದಿ ಸ್ವಾಮಿನಾಥನ್ ಹಾಗೂ ಸಮಾಜಸೇವಕಿ ಮತ್ತು ಲೋಕಸಭಾ ಸಂಸದೆಯಾಗಿದ್ದ ಎ.ವಿ. ಅಮ್ಮುಕುಟ್ಟಿ ಅವರ ಮಗಳು-ಮೃಣಾಲಿನಿ
ಸ್ವಿಟ್ಜರ್‌ಲೆಂಡ್‌ನಲ್ಲಿ ಡಾಲ್ಟ್ರೋಜ್ ಎನ್ನುವ ಪಾಶ್ಚಾತ್ಯ ಶೈಲಿಯ ನೃತ್ಯಕ್ಕೆ ಮೊದಲು ಹೆಜ್ಜೆ ಇಟ್ಟರು. ನಂತರ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರ ಮಾರ್ಗದರ್ಶನದಲ್ಲಿ ಭಾರತೀಯ ನೃತ್ಯವನ್ನು ಮೈಗೂಡಿಸಿಕೊಂಡರು. ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ವಿಕ್ರಂ ಸಾರಾಭಾಯಿ ಅವರನ್ನು ಮದುವೆಯಾದರು. ಶಾಸ್ತ್ರೀಯ ನೃತ್ಯದಲ್ಲಿ ಸಾಧನೆಗೈದಿರುವ ಸಾಧಕಿ ಮೃಣಾಲಿನಿ ಅವರ ಬದುಕು ಹಾಗೂ ಸಾಧನೆಗಳ ಸಂಕ್ಷಿಪ್ತನೋಟ ಈ ಕೃತಿಯಲ್ಲಿದೆ. ಡಾ. ಗೀತಾ ಶೆಣೈ ಕೃತಿ ಬರೆದಿದ್ದರೆ, ಡಾ. ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE