ಸಾಹಿತಿ ಎಂ. ನರಸಿಂಹಮೂರ್ತಿ (ಮ.ನ.ಮೂರ್ತಿ) ಅವರು ಬರೆದ ಐತಿಹಾಸಿಕ ಕೃತಿ-ಟಿಪ್ಪು ಸುಲ್ತಾನ್. ಮೈಸೂರು ಬಳಿಯ ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಟಿಪ್ಪುವಿನ ಕುರಿತು ಐತಿಹಾಸಿಕ ಮಹತ್ವದ ಸಂಗತಿಗಳನ್ನು ಒಳಗೊಂಡು ಬರೆದ ಜೀವನ ಚಿತ್ರವಿದು.
ಮ.ನ. ಮೂರ್ತಿ (06-06-1906, 22-04-1977) ಕಥೆ, ಕಾದಂಬರಿಕಾರರು, ಪತ್ರಿಕಾ ಸಂಪಾದಕರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿಯವರು. ತಂದೆ ಮಧ್ವರಾವ್ ಮತ್ತು ತಾಯಿ ಭೀಮಕ್ಕ. ಪ್ರೌಢಶಾಲೆ ಶಿಕ್ಷಣವನ್ನು ತುಮಕೂರಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಸೇರಿ ನಂತರ ಕನ್ನಡದಲ್ಲಿಯ ಆಸಕ್ತಿಯಿಂದ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರೀ ಹಾಗೂ ಟಿ.ಎಸ್. ವೆಂಕಣ್ಣಯ್ಯ ಅವರ ಪ್ರೋತ್ಸಾಹದಿಂದ ಬಿ.ಎ. ಪೂರೈಸಿದರು. ಕೃತಿಗಳು: ‘ಚಿಕ್ಕದೇವರಾಯ’ (ಕಾದಂಬರಿ), ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ (ಕಾದಂಬರಿಗಳು), ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷಿತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ...
READ MORE