ವಚನಕಾರ ಜೇಡರ ದಾಸಿಮಯ್ಯನವರ ಬದುಕು ಮತ್ತು ವಚನಗಳ ಓದು, ವಚನ ಸಾರಾಂಶ, ಮಾತೃಭೂಮಿಯ ತಾತ್ಪರ್ಯದ ಕುರಿತು ಲೇಖಕರು ಬಿಚ್ಚಿಟ್ಟಿದ್ಧಾರೆ. ದಕ್ಷಿಣ ವಾರಣಾಸಿ ಎಂದೇ ಖ್ಯಾತಿವೆತ್ತ ಮುದನೂರಿನ ಈ ವಚನಕಾರ ದೇವರ ದಾಸಿಮಯ್ಯನವರ ಖಡಕ್ ವಚನಗಳು ಮತ್ತು ಆತನ ಬದುಕು, ವೈಚಾರಿಕ ಚಿಂತನ, ನಿಲುವುಗಳು ಹಾಗೂ ಜನಪರ-ಜೀವಪರ ಧೋರಣೆಗಳು ಮತ್ತು ವಿಚಾರಶೀಲ ಬರಹಗಳನ್ನು ಒಳಗೊಂಡ ಬದುಕಿನ ಹಿನ್ನೆಲೆಯನ್ನು ಇಲ್ಲಿ ಚಿತ್ರಿಸಿದ್ದಾರೆ. ದಾಸಿಮಯ್ಯನವರ ವಚನಗಳಲ್ಲಿ ನಾಣ್ಣುಡಿಗಳನ್ನು ಹೆಕ್ಕಿ, ಅವುಗಳ ಭಾವಾರ್ಥವನ್ನು ನೀಡುವಲ್ಲಿ ಸಫಲರಾಗಿದ್ದಾರೆ.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE