ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರ ಜೀವನ ಚರಿತ್ರೆ ವಿವರಿಸುವ ಕೃತಿಯನ್ನು ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದಿದ್ದಾರೆ. ಪಂಡಿತ ನೆಹರು ವ್ಯಕ್ತಿ-ಶಕ್ತಿ, ಕಲೆ-ಸಂಸ್ಕೃತಿ-ಸಾಹಿತ್ಯ ಮತ್ತು ನೆಹರು ವಾಸ್ತವಿಕತೆ, ನೆಹರು ರಾಜಕೀಯ ಸಿದ್ಧಾಂತ, ಗಾಂಧೀಜಿ-ನೆಹರು ಸಂಬಂಧ- ದೃಷ್ಟಿ, ನೆಹರು-ಸಮಾಜವಾದಿ ನಿಲುವು, ನೆಹರು ಮೇಲೆ ಗಾಂಧೀಜಿಯ ಪ್ರಭಾವ, ಗಾಂಧೀಜಿ-ನೆಹರು ಜೈಲು ವಾಸ, ಗಾಂಧೀಜಿ-ನೆಹರು ಭಿನ್ನಾಭಿಪ್ರಾಯಗಳು, ಹಿಂದೂ-ಮುಸ್ಲಿಂ ಹಿಂಸೆ: ಗಾಂಧೀಜಿ-ನೆಹರು ಚಿಂತನೆ, ನೆಹರು ಹಾಸ್ಯಪ್ರಜ್ಷೆ-ಪ್ರಕೃತಿಪ್ರೇಮ, ನೆಹರು ಕೊನೆಯ ದಿನಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ನೆಹರು ಅವರ ವ್ಯಕ್ತಿತ್ವದ ಹತ್ತು ಹಲವು ಮಗ್ಗಲುಗಳನ್ನು ಪರಿಚಯಿಸಿದ್ದಾರೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE