ಗಿರೀಶ ಕಾರ್ನಾಡ ಅವರು ರಂಗನಟ, ನಾಟಕಕಾರ, ಕಿರುತೆರೆಯ ನಟ, ನಿರ್ದೇಶಕ, ಚಿತ್ರಕಥಾಲೇಖಕರಾಗಿ ಪ್ರಸಿದ್ಧರು. ನಾಟಕಕಾರರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಗಿರೀಶ ಕಾರ್ನಾಡರ ಬದುಕು ಮತ್ತು ಸಾಧನೆ ಕುರಿತು ಲೇಖಕ ಟಿ.ಎಸ್. ಗೋಪಾಲ್ ಅವರು ಕೃತಿ ರಚಿಸಿದ್ದು, ಸಾಹಿತಿ ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
ಲೇಖಕ ಟಿ. ಎಸ್. ಗೋಪಾಲ್ ಅವರ ಹೆಸರು ತಿರು ಶ್ರೀನಿವಾಸಾಚಾರ್ಯ ಗೋಪಾಲ್. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2013) ದೊರೆತಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಹಾಗೂ ಎಂ. ಎ. ಪದವಿ (ಚಿನ್ನದ ಪದಕ) ಪಡೆದಿರುವ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ...
READ MORE