ಲೇಖಕ ನರೇಂದ್ರ ರೈ ದೇರ್ಲ ಅವರ ಕೃತಿ ಅದ್ವಿತೀಯ. ಕೃತಿಯಲ್ಲಿ ಜೆ.ಎನ್ ಜಯದೇವ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಸರ್ಕಾರಿ ವ್ಯವಸ್ಥೆಯನ್ನು ಟೀಕಿಸುವುದು, ಜಿಗುಪ್ಪೆಯಿಂದ ಬಯ್ಯುವುದು ಮಾತ್ರ ಪ್ರಚಲಿತವಿದ್ದ ನಮ್ಮ ಗುಂಪಿನಲ್ಲಿ ಸರ್ಕಾರದ ವ್ಯವಸ್ಥೆ-ಹಣ, ಸೌಲಭ್ಯ ಇರುವುದು ಜನರಿಗಾಗಿ, ಇವೆಲ್ಲವೂ ಜನರಿಗೆ ತಲುಪುವ ಹಾಗೆ ಕೆಲಸ ಮಾಡುವುದೇ ಸಮಾಜಕಾರ್ಯ, ಜನ ಎಚ್ಚೆತ್ತು ತಮ್ಮ ಹಕ್ಕನ್ನು ಅರಿತು ಜವಾಬ್ದಾರಿಯಿಂದ ವರ್ತಿಸಿದರೆ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಚೆನ್ನಾಗಿ ಜನರನ್ನು ತಲುಪುತ್ತವೆ. ಎಂಬ ಹೊಸ ಪ್ರತಿಪಾದನೆಯನ್ನು ಹಂತ ಹಂತವಾಗಿ ನಮಗೆ ಮನವರಿಕೆ ಮಾಡಿಕೊಟ್ಟವರು ಶೀನ ಶೆಟ್ಟಿ - ಕೃಷ್ಣ ಮೂಲ್ಯ ಅವರೊಡನೆ ಎರಡು ಮೂರು ದಶಕಗಳ ಒಡನಾಟ ನನಗಿದೆ. ಜನರ ಪರವಾಗಿ ಪರಕೀಯನೊಬ್ಬ ದನಿಯೆತ್ತಿ, ಅಧಿಕಾರಿಗಳನ್ನು ಹೆದರಿಸಿ ವೆದುಸಿ ನ್ಯಾಯ ಒದಗಿಸುವ ಬದಲಾಗಿ, ಜನರೇ ತಮ್ಮ ಸಮಸ್ಯೆಗಳನ್ನು ತಾವೇ ಮುಖಾಮುಖಿಯಾಗಿ ಎದುರಿಸಿ ಪರಿಹಾರ ಪಡೆಯುವುದು ಶೀನ ಶೆಟ್ಟಿ - ಕೃಷ್ಣ ಮೂಲ್ಯ ಅವರ ಸಮಾಜಸೇವೆಯ ತಾತ್ವಿಕ ನೆಲೆಗಟ್ಟು, ಹಲವು ಬಗೆಯ ಸೇವಾ ಕಾರ್ಯಗಳಲ್ಲಿ ತೊಡಗಿರುವ ಶ್ರೀ ತೇನ ಶೆಟ್ಟಿ ಮತ್ತು ಶ್ರೀ ಕೃಷ್ಣ ಮೂಲ್ಯ ಅವರು ಇಂದಿನ ಯುವಪೀಳಿಗೆಗೆ ಆದರ್ಶವಾಗಲಿ. ಈ ಕೃತಿಯ ಲೇಖಕರಾದ ಡಾ. ನರೇಂದ್ರ ರೈ ದೇರ್ಲ ಅವರು ಕೃಷಿ-ಪರಿಸರಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಬರೆದವರು. ಹಲವಾರು ಕೃತಿಗಳನ್ನು ನಡೆಸಿದವರು. ತೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ಸೇವಾಕಥನವನ್ನು ಈ ಕೃತಿಯಲ್ಲಿ ಓದುಗರ ಮನ ಮುಟ್ಟುವಂತೆ ಅನಾವರಣಗೊಳಿಸಿದ್ದಾರೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಡಾ. ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ನರೇಂದ್ರ ರೈ ದೇರ್ಲ ಅವರು ಪತ್ರಕರ್ತರೂ ಹೌದು. ಹಾಗೆಯೇ ಕವಿಗಳೂ ಕೂಡ. 'ತೊದಲು' ಕವನ ಸಂಕಲನದ ನಂತರ ಗದ್ಯ ಬರವಣಿಗೆ ಮುಂದುವರಿಸಿದರು. ಆದರೆ, ಪದ್ಯದ ಗುಣ ಅವರ ಗದ್ಯಕ್ಕಿದೆ. ಅವರಿಗೆ ಸಾವಯವ ಕೃಷಿಯಲ್ಲಿ ವಿಶೇಷ ಆಸಕ್ತಿ . ಹಾಗಯೇ ಪರಿಸರದ ಬಗ್ಗೆ ಗಾಢ ಅನುರಕ್ತಿ. ತೇಜಸ್ವಿಯೊಳಗಿನ ಕಲಾವಿದ'ನನ್ನು ಕಂಡರಿಸಿದ ನರೇಮದ್ರ ಅವರು 'ನಮ್ಮೆಲ್ಲರ ತೇಜಸ್ವಿ'ಯ ಅನಾವರಣಗೊಳಿಸಿದ್ದಾರೆ. ’ವಿಶುಕುಮಾರ್ ಬದುಕು ಬರೆಹ'; 'ಹೊನ್ನಯ ಶೆಟ್ಟಿ ಬದುಕು ಬರೆಹ'; 'ಡಾ. ಮೋಹನ ...
READ MORE