`ಮಾಧವ ಶ್ರೀಹರಿ ಅಣೆ' ಅವರ ಜೀವನ ಚರಿತ್ರೆಯ ಪುಸ್ತಕವಿದು. ಲೇಖಕ ವೆಂ.ಮು. ಜೋಶಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ದೇಶದ ಹಿತವನ್ನೆ ಮುಖ್ಯ ಗುರಿಯಾಗಿಟ್ಟುಕೊಂಡು ಹಲವು ರೀತಿಗಳಲ್ಲಿ ದುಡಿದರು. ಬ್ರಿಟಿಷರ ಕಾನೂನು ಮುರಿದು ಸೆರೆಮನೆ ಸೇರಿದರು. ವೈಸರಾಯರ ಸಲಹಾ ಮಂಡಳಿಯಲ್ಲಿ ಕೆಲಸ ಮಾಡಿದರು. ವೈಸರಾಯಿ ತಪ್ಪು ಮಾಡಿದನೆಂದು ಕಂಡಾಗ ರಾಜೀನಾಮೆ ಕೊಟ್ಟರು. ಸ್ವತಂತ್ರ ಭಾರತದಲ್ಲಿಯೂ ಸೇವೆ ಸಲ್ಲಿಸಿದರು ಎಂದು ಮಾಧವ ಶ್ರೀಹರಿ ಅಣೆ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.
ಮಾಧವ ಶ್ರೀಹರಿ ಅಣೆ ಅವರ ದೇಶಪ್ರೇಮ, ಬ್ರಿಟಿಷರ ವಿರುದ್ಧ ನಿಂತ ಪರಿ, ಸೆರೆಮನೆಯ ದಿನಗಳು, ಸಲಹಾಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಗೆ, ಜನಸಾಮಾನ್ಯರೊಂದಿಗಿನ ನಂಟು ಹೀಗೆ ಮಾಧವ ಶ್ರೀಹರಿ ಅಣೆ ಅವರ ಜೀವನದ ಹಂತಗಳನ್ನು ಲೇಖಕರು ಇಲ್ಲಿ ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.
ಲೇಖಕ ಜೋಶಿ ವೆಂ.ಮು. ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು. ಕರ್ನಾಟಕ ರಾಜ್ಯದ ಸಣ್ಣ ಉಳಿತಾಯ ಇಲಾಖೆಯ ಪ್ರಚಾರಕರಾಗಿದ್ದರು. ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ರಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕೃತಿಗಳು; ಚಿನ್ನದ ಪದಕ, ಹೊಸಬೆಳಕು, ಸೈನಿಕ ಉವಾಚ, ಸಮರ ಸೌದಾಮಿನಿ, ಸೆಳೆತದ ಶಿಲುಬೆ. ...
READ MORE