’ಬಹುಮುಖ ಅಭಿವೃದ್ದಿಯ ಕನಸುಗಾರ ಯು.ಎಸ್.ನಾಯಕ್’ ಕೃತಿಯು ವಸಂತ ಕುಮಾರ್ ಅವರ ಕೃತಿ. ಯು.ಎಸ್. ನಾಯಕ್ ಅವರ ಏಕವ್ಯಕ್ತಿ ಆಧಾರಿತ ಜೀವನದ ಹಾಗೂ ಸಾಧನೆಗಳ ಕುರಿತು ಬರೆದಿದ್ದಾರೆ. ಲೇಖಕ ಯು.ಎಸ್.ನಾಯಕ್ ಅವರ ವ್ಯಕ್ತಿತ್ವದ ಚಿತ್ರಣವನ್ನು ಮಾಡುವ ಲೇಖಕ ಬಾಹ್ಯ ವ್ಯಕ್ತಿತ್ವವನ್ನು ಇಲ್ಲಿ ಪರಿಚಯಿಸಿದ್ದಾರೆ. ದುಂಡುಮುಖ, ತಲೆತುಂಬ ನೀಳವಾದ ಕೂದಲು, ಮುಖತುಂಬ ಋಷಿಸದೃಶವಾದ ಗಡ್ಡ, ತೀಕ್ಷ್ಮದೃಷ್ಟಿ, ಕಣ್ಣುಗಳಿಗೊಂದು ಕನ್ನಡಕ, ಖಾದಿ ಜುಬ್ಬಾ, ತೀರಾ ಎತ್ತರವೂ ಅಲ್ಲದ ಸಾಧಾರಣ ಮೈಕಟ್ಟು, ಮುಖದಲ್ಲಿ ಹೊರಹೊಮ್ಮುವ ದೃಢವಾದ ಆತ್ಮವಿಶ್ವಾಸ ಮೊದಲಾದ ಲಕ್ಷಣಗಳಿಂದ ರೂಪುಗೊಂಡವರು ಶ್ರೀ ಉಪೇಂದ್ರ ಶ್ರೀನಿವಾಸ ನಾಯಕ ಎನ್ನುತ್ತಾರೆ.
'ಯು.ಎಸ್.ನಾಯಕ್' ಎಂದೇ ನಾಡಿನಾದ್ಯಂತ ಗುರುತಿಸಿಕೊಂಡವರು, ಸಾರಿಗೆ ಶಿಕ್ಷಣ, ಉದ್ಯಮ, ರಾಜಕೀಯ, ಸಮಾಜ, ಆರೋಗ್ಯ ಮೊದಲಾದ ರಂಗಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದವರು. ಸಾಮಾಜಿಕವಾದ ಅಸಮತೋಲನಗಳಿಗೆ, ಶೋಷಣೆಗಳಿಗೆ ಸಿಡಿದೆದ್ದು ಪ್ರತಿಭಟಿಸಿದವರು ಎನ್ನುವ ವಿಚಾರಗಳು ಇಲ್ಲಿವೆ. ಶಿಕ್ಷಣವೇ ಪ್ರಧಾನವೆಂದುಕೊಂಡು ಹಲವಾರು ಊರುಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ, ನಾಡಿನ ಜನರನ್ನು ಅಕ್ಷರಸ್ಥರನ್ನಾಗಿ ಪರಿವರ್ತಿಸುವುದಕ್ಕೆ ಪ್ರಯತ್ನಿಸಿ ಗೆಲುವನ್ನು ಸಾಧಿಸಿದವರ ಚಿತ್ರಣವನ್ನು ಇಲ್ಲಿ ಲೇಖಕ ಕಟ್ಟಿಕೊಟ್ಟಿದ್ದಾರೆ. ಸಾರಿಗೆ ಸಂಸ್ಥೆಗಳನ್ನು ಹುಟ್ಟುಹಾಕಿ ಕರಾವಳಿ ಜಿಲ್ಲೆಯಾದ್ಯಂತ ಸಾವಿರಾರು ಜನರ ಪ್ರಯಾಣಕ್ಕೆ ಅನುಕೂಲವನ್ನು, ನೂರಾರು ಜನರ ಬದುಕಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟವರು. ಆರೋಗ್ಯವೇ ಭಾಗ್ಯವೆಂಬುದನ್ನು ಕಂಡುಕೊಂಡು ಉಡುಪಿಯಲ್ಲಿ ಸರಕಾರಿ ಆಸ್ಪತ್ರೆಯೊಂದನ್ನು ಕಟ್ಟಿಸುವುದಕ್ಕೆ ಶ್ರಮಿಸಿ ಯಶಸ್ಸುಗಳಿಸಿದವರು-ಹೀಗೆ ಹಲವಾರು ರಂಗಗಳಲ್ಲಿ ಅಚ್ಚಳಿಯದ ಸಾಧನೆಗಳನ್ನು ಗೈದು ಮುಂದಿನ ಜನಾಂಗಕ್ಕೆ ಮಾರ್ಗದರ್ಶಿಯಾದ ಬಹುಮುಖ ಪ್ರತಿಭೆ ಶ್ರೀ ಯು.ಎಸ್, ನಾಯಕ ಬದುಕಿನ ಅನಾವರಣ ಈ ಕೃತಿಯಾಗಿದೆ.
ಲೇಖಕ ಡಾ. ವಸಂತ ಕುಮಾರ ಅವರು ಉಡುಪಿ ಜಿಲ್ಲೆಯ ಕಾರ್ಕಳದವರು. ಸದ್ಯ ಉಡುಪಿಯಲ್ಲಿ ವಾಸ. ಬಿ.ಎ. (1998), ಎಂ.ಎ. (1990) ಮತ್ತು ‘ಕವಿಸಾಳ್ವನ ರಸ ರತ್ನಾಕರ: ಒಂದು ಅಧ್ಯಯನ’ ವಿಷಯವಾಗಿ ಎಂ.ಫಿಲ್ (1991) ಹಾಗೂ `ರನ್ನನ ಕೃತಿಗಳಲ್ಲಿ ಕಾವ್ಯತತ್ವ ' (2005) ವಿಷಯವಾಗಿ ಪಿಎಚ್ ಡಿ ಪಡೆದರು. ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು (1992-93), ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು (1993-95), ಎರ್ನಾಕುಲಂ ನಲ್ಲಿಯ ಕಾಲಡಿಯ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿ.ವಿ. (1995-97) ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು (1997 ಅಕ್ಟೋಬರ್ ವರೆಗೆ), ನಂತರ ಉಡುಪಿಯ ...
READ MORE