ಬಿ.ಎ.ಸನದಿ

Author : ಬಸು ಬೇವಿನಗಿಡದ

Pages 112

₹ 100.00




Year of Publication: 2020
Published by: ಸಿವಿಜಿ ಪಬ್ಲಿಕೇಷನ್ಸ್,
Address: # 277, 5ನೇ ಅಡ್ಡರಸ್ತೆ, ವಿಧಾನಸೌಧ ವಿಸ್ತರಣೆ, ಲಗ್ಗೆರೆ, ಬೆಂಗಳೂರು-560058

Synopsys

ಸಾಹಿತಿ ಬಸೂ ಬೇವಿನಗಿಡದ ಅವರು ಕವಿ ಬಿ.ಎ. ಸನದಿ ಅವರು ಬದುಕು-ಬರಹ ಕುರಿತು ಬರೆದ ಕೃತಿ-ಬಿ.ಎ. ಸನದಿ.ಕನ್ನಡದ ಪಿಸುದನಿಯ ಕವಿ ಎಂದೇ ಸನದಿ ಅವರು ಖ್ಯಾತಿ ಪಡೆದಿದ್ದಾರೆ. ಸಾಹಿತ್ಯ ಹಾಗೂ ಬದುಕಿನಲ್ಲಿ ಅಬ್ಬರದಲ್ಲಿ ಮೆರೆದವರಲ್ಲ. ತನ್ನದೇ ಸರಿ ಏಂದು ವಾದಿಸಿದವರಲ್ಲ. ಬರೆಯಬೇಕಾದದ್ದನ್ನು ಮಾತ್ರ ಬರೆದಿದ್ದಾರೆ. ಮಾನವತಾವಾದವನ್ನು ನಂಬಿದ ಇವರು ಬದುಕಿನಲ್ಲಿ ಬದ್ಧತೆಯೊಂದಿಗೆ ಜೀವಿಸಿದವರು. ಇವರ ಕವನಗಳು ವೈವಿಧ್ಯಪೂರ್ಣವೂ ಆಗಿದೆ. ಸಾಮಾನ್ಯ ಜನರ ಪರವಾಗಿವೆ. ಇಂತಹ ವ್ಯಕ್ತಿತ್ವ ಕುರಿತು ಲೇಖಕರು ರಚಿಸಿದ ಕೃತಿ ಇದು. 

ಜಿಲೇಬಿ ರುಚಿಯ ಮಕ್ಕಳ ಲೇಖಕ, ಸನದಿಯವರ ಆರಂಭಿಕ ಯಶಸ್ಸು, ಲಯ ಮತ್ತು ಕುಣಿತದ ಮೋಡಿಯ ಬರಹಗಾರ, ಸನದಿ ಮತ್ತು ಸಮಕಾಲೀನರಲ್ಲಿ ವಸ್ತು ಮತ್ತು ಭಾಷಾ ಪ್ರಯೋಗಗಳು, ಸನದಿಯವರ ಗದ್ಯ ಬರಹಗಳು ಮತ್ತು ಅನುವಾದಗಳು ಹೀಗೆ ಐದು ಅಧ್ಯಾಯಗಳಲ್ಲಿ ಅವರ ವ್ಯಕ್ತಿಗತ ಹಾಗೂ ಸಾಹಿತ್ಯಕ ಎತ್ತರಗಳನ್ನು ತೋರುವಲ್ಲಿ ಲೇಖಕರು ಶ್ರಮಪಟ್ಟಿದ್ದಾರೆ.  ನಾಟಕೀಯ ಗುಣಗಳಿಂದ, ಮಕ್ಕಳನ್ನು ಆಟಕ್ಕೆ ಎಳೆಸುವ ಸಹಜ ಚಟುವಟಿಕೆಗಳ ಲಕ್ಷಣಗಳಿಂದ ಮಕ್ಕಳ ಬರವಣಿಗೆಯ ಕವಿತೆ ಹಾಗೂ ಗದ್ಯ ಬರಹಗಳು ಆಕರ್ಷಕವಾಗಿವೆ. ಅವು ಮತ್ತೆ ಮತ್ತೆ ಮೆಲುಕು ಹಾಕುವಂತಹ ಗುಣಗಳನ್ನು ಹೊಂದಿವೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.  

 

About the Author

ಬಸು ಬೇವಿನಗಿಡದ
(12 July 1964)

ಕಥೆಗಾರ  ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ  (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...

READ MORE

Related Books