ಜಗದ್ವಿಖ್ಯಾತರು-ಕೃತಿಯನ್ನು ಪಾ.ವೆಂ. ಆಚಾರ್ಯರು ಬರೆದಿದ್ದಾರೆ. ಜೀವನದ ಎಲ್ಲ ರಂಗಗಳಲ್ಲಿಯೂ ವಿಜೃಂಭಿಸಿದವರ ಕುರಿತು ಜನರಿಗೆ ತಲುಪುವಂತೆ ಬರೆದಿದ್ದಾರೆ. ವಿಜ್ಞಾನಿಗಳಷ್ಟೇ ತತ್ವವೇತ್ತರು, ಸಾಹಿತಿಗಳು, ಉದ್ಯಮಿಗಳು ಮುಂತಾದವರ ಜೀವನದ ಯಶಸ್ಸಿನ ಮರ್ಮವನ್ನು, ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ಈ ಸಂಕಲನದ ಮತ್ತೊಂದು ವಿಶೇಷತೆ ಎಂದರೆ, ವ್ಯಕ್ತಿಗಳ ಬಗ್ಗೆ ವಿವರಿಸ ಹೋಗುವುದಿಲ್ಲ. ಆದರೆ ಅವುಗಳನ್ನು ಓದಿದಾಗ ವ್ಯಕ್ತಿಗಳ ಚಿತ್ರಣವು ತಾನಾಗೇ ತೆರೆದುಕೊಳ್ಳುತ್ತದೆ.
ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್' ಸೇರಿದರು. ...
READ MORE