ನಾಡೋಜ ಬೆಳಗಲ್ಲು ವೀರಣ್ಣ

Author : ಟಿ.ಕೆ. ಗಂಗಾಧರ ಪತ್ತಾರ

Pages 96

₹ 25.00




Year of Publication: 2020
Published by: ಕರ್ನಾಟಕ ಜಾನಪದ ಪರಿಷತ್ತು
Address: # 1, ಜಲದರ್ಶನ ಬಡಾವಣೆ, ಹೊಸ ಬಿಇಎಲ್ ರಸ್ತೆ, ಬೆಂಗಳೂರು-560054
Phone: 08023605033

Synopsys

ಲೇಖಕ ಟಿ.ಕೆ. ಗಂಗಾಧರ ಪತ್ತಾರ ಅವರು ತೊಗಲುಗೊಂಬೆಯಾಟ ಖ್ಯಾತಿಯ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರ ಬದುಕು ಹಾಗೂ ಸಾಧನೆಯ ಎತ್ತರಗಳನ್ನು ಕುರಿತು ಬರೆದ ಕೃತಿ-ನಾಡೋಜ ಬೆಳಗಲ್ಲು ವೀರಣ್ಣ. ಜಾನಪದ ಲೋಕ 25 ವರ್ಷ ಕಳೆದು ಬೆಳ್ಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಶ್ರಮಿಸಿದ ಕಲಾವಿದರ ಪ್ರತಿಭೆ ಅನಾವರಣಕ್ಕಾಗಿ ಪುಸ್ತಕ ಮಾಲೆಯಡಿ ಈ ಕೃತಿ ಪ್ರಕಟಿಸಿದೆ. ಬೆಳಗಲ್ಲು ವೀರಣ್ಣ, ಅವರ ಬದುಕು, ಕಲಾಸಕ್ತಿ, ಆರ್ಥಿಕ ಸಂಕಷ್ಟಗಳು, ತೊಗಲುಗೊಂಬೆಯಾದ ಪ್ರದರ್ಶನಕ್ಕೆ ಎದುರಾದ ಕಷ್ಟಗಳು, ಇಂತಹ ಆಟಗಳ ಬಗೆಗಿನ ಜನಸಾಮಾನ್ಯರಲ್ಲಿಯ ಅಸಡ್ಡೆಗಳು. ಅವರಿಗೆ ಸಂದ ಗೌರವ-ಪ್ರಶಸ್ತಿ-ಪುರಸ್ಕಾರಗಳು ಹೀಗೆ ಅವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಕೃತಿ.

About the Author

ಟಿ.ಕೆ. ಗಂಗಾಧರ ಪತ್ತಾರ

ಲೇಖಕ ಟಿ.ಕೆ. ಗಂಗಾಧರ ಪತ್ತಾರ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರದವರು. ತಂದೆ ಕೀ.ಶೇ. ಕಾಳಪ್ಪ ಪತ್ತಾರ. (ಪಂಡಿತ ರಾಜೀವ್ ತಾರಾನಾಥರಿಗೆ ಪ್ರಪ್ರಥಮವಾಗಿ ಸಂಗೀತ ಅಭ್ಯಾಸ ಮಾಡಿಸಿದವರು.) ಮೈಸೂರು ದಸರಾ, ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಗಡಿ ಸಾಹಿತ್ಯ ಸಮ್ಮೇಳನ ಹೀಗೆ ವಿವಿಧ ವೇದಿಕೆಗಳಡಿ  ಕವಿತೆ ವಾಚನ, ಉಪನ್ಯಾಸಗಳನ್ನು ಮಂಡಿಸಿದ್ದಾರೆ. ದೂರದರ್ಶನ ಚಂದನದಲ್ಲಿ ಬೆಳಗು ಕಾರ್ಯಕ್ರಮ ಮತ್ದತು ಧಾರವಾಡ ಹಾಗೂ ಹೊಸಪೇಟೆ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ.  ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಹೋಬಳಿ (2004) ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ವೈದ್ಯಕೀಯ ...

READ MORE

Related Books