ಸಿಮೊನ್ ದ ಬೋವಾ

Author : ವಿಕ್ರಮ ವಿಸಾಜಿ

Pages 320

₹ 300.00




Year of Publication: 2021
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರು ಬಳ್ಳಾರಿ-583113
Phone: 9480353507

Synopsys

‘ಸಿಮೊನ್ ದ ಬೋವಾ’ ಕೃತಿಯು ವಿಕ್ರಾಮ ವಿಸಾಜಿ ಅವರ ಅನುವಾದಿತ ಮಾತು ಕಥನ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕೆ.ವಿ ನಾರಾಯಣ ಅವರು, `ಯಾವುದೋ ಕಾಲದೇಶದ ಹೆಂಗಸೊಬ್ಬರ ಬರಹಗಳನ್ನು, ಮಾತುಗಳನ್ನು ನಮ್ಮ ನುಡಿಯಲ್ಲಿ ಈಗ ಓದುವ ಅಗತ್ಯವಿದೆಯೇ? ಅವರ ಬದುಕು, ಅವರ ದಾರಿಗಳು ನಮಗೆ ಏನನ್ನು ಒದಗಿಸಬಲ್ಲವು? ಈ ಓದಿಗೆ ಕೇವಲ ರೋಚಕತೆಯ ಹುಡುಕಾಟ, ಕುತೂಹಲಗಳಷ್ಟೇ ಕಾರಣವಾಗಿದ್ದರೆ ಆಗ ಅಂತಹ ಓದುಗಳು ನಾವು ಓದಿ ಓದಿ ಬದಿಗೆ ಸರಿಸುವ ಹಲವಾರು ಓದುಗಳ ಬುಟ್ಟಿಗೆ ಸೇರಿಹೋಗುತ್ತವೆ. ಆದರೆ ಸಿಮೊನ್ ದ ಬೋವಾ ಅವರ ಬರಹ ಮತ್ತು ಮಾತುಗಳಿಗೆ ಇದು ಹೊಂದುವುದಿಲ್ಲ. ಏಕೆಂದರೆ, ಈ ಬರಹ ಮತ್ತು ಮಾತುಗಳು ನಮ್ಮ ತಿಳಿವಳಿಕೆಗಳನ್ನು ನಮ್ಮ ಸಿದ್ಧಗ್ರಹಿಕೆಗಳ ಬುಡಗಳನ್ನು ಅಲುಗಿಸಬಲ್ಲವು. ನಾವು ಒಪ್ಪಿ ನಡೆದುಕೊಳ್ಳುತ್ತಿರುವ ಬಗೆಯನ್ನು ಪರೀಕ್ಷಿಸಲು ಅನುಮಾಡಿಕೊಡಬಲ್ಲವು. ಇದು ದಿಟ’ ಎಂದಿದ್ದಾರೆ.

ನಿರಂತರವಾಗಿ ಆಗುವಿಕೆಯನ್ನು ನಂಬಿ ಒಪ್ಪಿ ಬದುಕಿದ ಸಿಮೊನ್ ದ ಬೋವಾ ಕಳೆದ ಶತಮಾನದ ಒಂದು ಅಚ್ಚರಿ ಹಾಗೂ ಎಲ್ಲರಿಗೂ ಒಂದು ಗುರುತು, ಗೆರೆ. ಅವರ ಬರಹ ಮತ್ತು ಮಾತುಗಳು ತಮ್ಮ ಬದುಕಿದ ದಾರಿಯ ಮುಂದುವರಿಕೆಗಳಾಗಿರುವಂತೆ ಅವರು ನೋಡಿಕೊಂಡಿದ್ದವರು. ಹಾಗಾಗಿ, ಅವರ ಬರಹಗಳು, ಮಾತುಗಳು ಅವರ ಬದುಕಿಗೆ ಅವರೇ ಹಿಡಿದುಕೊಂಡ ಕನ್ನಡಿಗಳಂತೆ ತೋರುತ್ತವೆ. ಅವರ ಬದುಕಿನ ನಾಲ್ಕು ಹಂತಗಳಲ್ಲಿ ಬರೆದ ನೆನಪುಗಳು' ತಾವು ಕಳೆದ ಸಮಯವನ್ನು ತಳೆದ ನಿಲುವುಗಳನ್ನು ಪರಿಶೀಲಿಸಿದ ನಂಬಿಕೆಗಳನ್ನು, ಬಿಟ್ಟು ಕೊಟ್ಟ ಆಯ್ಕೆಗಳನ್ನು ಮತ್ತೆ ಅವರೇ ಕಟ್ಟಿಕೊಳ್ಳುವುದಕ್ಕೆ ಮತ್ತು ನಮಗೆ ಕಟ್ಟಿ ಕೊಡುವುದಕ್ಕೆ ಮಿತಗೊಳ್ಳದೆ, ಅವರ ಬದುಕು ಹಿಡಿಯಬಹುದಾದ ಮುಂದಿನ ದಾರಿಗೆ ಬೆಳಕನ್ನೂ ಚೆಲ್ಲುವಂತಿವೆ. ತಮ್ಮೊಳಗೇ ನೆಲೆಗೊಳ್ಳಬಹುದಾಗಿದ್ದ ಆತ್ಮಪ್ರತ್ಯಯ ಮತ್ತು ಕೆಟ್ಟ ನಂಬಿಕೆಗಳನ್ನು ಹತ್ತಿಕ್ಕಲು ನೆರವಾಗುವಂತಿವೆ. ಅಂದರೆ, ಅವರು ಓದುಗರಿಗಾಗಿ ಈ ನೆನಪುಗಳನ್ನು ಮಂಡಿಸುತ್ತಿದ್ದರೂ, ಆ ಮಂಡನೆಯಲ್ಲಿ ಅವರಿಗೂ ಬೇಕಾಗಿದ್ದ ಸೂಚನೆಗಳಿವೆ ಎಂಬುದನ್ನು ಇಲ್ಲಿ ಲೇಖಕ ವಿವರಿಸುತ್ತಾ ಹೋಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books