ಅಕ್ಕಮಹಾದೇವಿ ಅವರ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಹಾ.ಮಾ. ನಾಯಕ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಚೆನ್ನಮಲ್ಲಿಕಾರ್ಜುನನೆ ನನ್ನ ಗಂಡ ಎಂದು ತನ್ನನ್ನು ಮಹಾದೇವನಿಗೆ ಅರ್ಪಿಸಿಕೊಂಡ ಭಕ್ತೆ. ತಂದೆ ತಾಯಿಯ ಜೀವ ಉಳಿಸಲು ಶಿವಭಕ್ತನಲ್ಲದ ರಾಜನ ಕೈ ಹಿಡಿದಳು. ಅರಮನೆಯಲ್ಲಿ ನೋವಿನ ಮಧ್ಯೆಯೂ ತನ್ನ ತಪಸ್ಸನ್ನು ನಡೆಸಿದಳು. ಕಡೆಗೆ ಅರಮನೆಯನ್ನು ಬಿಟ್ಟು ಶಿವಶರಣರನ್ನು ಸೇರಿದಳು. ಅಲ್ಲಿಂದ ಶ್ರೀಶೈಲಕ್ಕೆ ಹೋಗಿ ಮಹಾದೇವನಲ್ಲಿ ಐಕ್ಯಳಾದಳು. ಚೆನ್ನಮಲ್ಲಿಕಾರ್ಜುನನಲ್ಲಿ ಭಕ್ತಿ – ಅವನಿಂದ ದೂರವಾಗಿರುವೆನೆಂಬ ನೋವು ಅವಳ ಹೃದಯದಿಂದ ಮಾತುಗಳಲ್ಲಿ ಚಿಮ್ಮಿತು, ಆ ಮಾತುಗಳೇ ಸುಂದರ ವಚನಗಳಾದವು ಎಂದು ಅಕ್ಕಮಹಾದೇವಿಯ ಕುರಿತು ಈ ಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ.
ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...
READ MORE