ವಿಶ್ವ ಪ್ರಸಿದ್ಧ ಗಣಿತ ತಜ್ಞ ರಾಮಾನುಜನ್ ಅವರ ಸರಳ ಜೀವನದ ಅಸಾಮಾನ್ಯ ಸಾಧನೆ ಕುರಿತ ಕೃತಿ -’ಅನಂತದ ಒಡನಾಟದಲ್ಲಿ’.
ಭಾರತ ಹಾಗೂ ಪಶ್ಚಿಮ ದೇಶಗಳ ಸಾಂಪ್ರದಾಯಗಳ ಮಧ್ಯೆ ನಡೆದ ಹಗ್ಗ ಜಗ್ಗಾಟವೂ ಈ ಕೃತಿ. ದಕ್ಷಿಣ ಭಾರತದ ಕುಂಭಕೋಣಂ ನಂತಹ ಸಾಂಪ್ರದಾಯಿಕ ಪರಿಸರ ಒಂದೆಡೆ ಥಳಕು-ಬೆಳಕಿನ ಕೆಂಬ್ರಿಡ್ಜ್ ಮತ್ತೊಂದೆಡೆ. ತಾರ್ಕಿಕ ನಿಲುವುಗಳನ್ನು ಆಧರಿಸಿದ ಪಾಶ್ಚಾತ್ಯ ಗಣಿತ ಪರಂಪರೆ ಒಂದೆಡೆ ಹಾಗೂ ಪೂರ್ವ-ಪಶ್ಚಿಮಗಳೆರಡನ್ನೂ ಸಮಾನವಾಗಿ ಬೆರಗುಗೊಳಿಸಿದ ರಾಮಾನುಜನ್ ಅವರ ನಿಗೂಢ ಹಾಗೂ ಚಮತ್ಕಾರದ ಕಥೆ ಮತ್ತೊಂದೆಡೆ.
ಸುಮಾರು 20 ವರ್ಷ ಹಿಂದೆ ರಾಬರ್ಟ್ ಕಾನಿಗೆಲ್ ಎಂಬ ವಿಜ್ಞಾನ ಬರಹಗಾರರು ರಾಮಾನುಜನರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಬರೆದು “The Man Who Knew Infinity : A Life of the Genius Ramanujan” ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದರು ಕಳೆದ ವರ್ಷದ ಡಿಸೆಂಬರ್ ಮಾಸದಲ್ಲಿ ಆ ಪುಸ್ತಕವನ್ನು ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಸೆಂಟರ್ ಫಾರ್ ಅಪ್ಲಿಕೆಬಲ್ ಮ್ಯಾಥಮ್ಯಾಟಿಕ್ಸ್ ನಲ್ಲಿ ಪ್ರಾಧ್ಯಾಪಕ ಸಿ.ಎಸ್. ಅರವಿಂದರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಪುಸ್ತಕ ಶೀರ್ಷಿಕೆಯೇ “ಅನಂತದ ಒಡನಾಟದಲ್ಲಿ ಅರಳಿದ ಅಸಾಧಾರಣ ಗಣಿತ ಪ್ರತಿಭೆ ರಾಮಾನುಜನ್”.1 ಲೇಖಕರೇ ಹೇಳುವಂತೆ ಈ ಪುಸ್ತಕದಲ್ಲಿಯ ರಾಮಾನುಜನ್ ಕಥೆಯು, ಒಬ್ಬ ಸಾಮಾನ್ಯನಾದ, ಅರ್ಥವ್ಯಾಪ್ತಿಗೆ ಸಿಲುಕದ, ಮೇಧಾವಿಯ ಹಾಗೂ ಸರಳಜೀವಿಯ ಒಂದು ಕಥೆ.
ಇಂತಹ ವೈರುಧ್ಯಗಳನ್ನು ಲೇಖಕ ಸಿ.ಎಸ್.ಆರವಿಂದ ಅವರು ಸಮರ್ಥವಾಗಿ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಗಣಿತದ ಭಾಗಗಳನ್ನು ಬರೆಯುವಾಗ ಬಹುಮಟ್ಟಿಗೆ ರೂಢಿಯಲ್ಲಿರುವ ಪದಗಳನ್ನೇ ಬಳಸಿಕೊಂಡಿದ್ದರೂ ಓದುಗರಿಗೆ ಅನುಕೂಲವಾಗಲೆಂದು ಗಣಿತ ಪಾರಿಭಾಷಿಕ ಪದಕೋಶವನ್ನು ಕೊನೆಯಲ್ಲಿ ಕೊಡಲಾಗಿದೆ.
ಸಿ.ಎಸ್. ಅರವಿಂದ ಅವರು ಬೆಂಗಳೂರಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರು. ಸುಮಾರು 20 ವರ್ಷ ಹಿಂದೆ ರಾಬರ್ಟ್ ಕಾನಿಗೆಲ್ ಎಂಬ ವಿಜ್ಞಾನ ಬರಹಗಾರರು ರಾಮಾನುಜನರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಬರೆದು “The Man Who Knew Infinity : A Life of the Genius Ramanujan” ಶೀರ್ಷಿಕೆಯಡಿ ಪುಸ್ತಕ ಪ್ರಕಟಿಸಿದರು ಕಳೆದ ವರ್ಷದ ಡಿಸೆಂಬರ್ ಮಾಸದಲ್ಲಿ ಸಿ.ಎಸ್. ಅರವಿಂದರು ’ಅನಂತದ ಒಡನಾಟದಲ್ಲಿ’ ಶೀರ್ಷಿಕೆಯಡಿ ಗಣಿತ ತಜ್ಞ ರಾಮಾನುಜಂ ಅವರ ಜೀವನ ಸಾಧನೆಗಳ ಬಗ್ಗೆ ಬರೆದಿದ್ದಾರೆ. 2017 ರಿಂದ ಭಾವನಾ ಎಂಬ ಗಣಿತದ ಆಂಗ್ಲ ನಿಯತಕಾಲಿಕೆಯನ್ನು ಪ್ರಕಟಿಸುತ್ತಿದ್ದು, ...
READ MORE