ಭಾರತದ ದೇಶಪ್ರೇಮಿ ಹಾಗೂ ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಲೇ ಜನಮಾನಸದಲ್ಲಿ ನೆಲೆಸಿದವರು ಜಯಪ್ರಕಾಶ ನಾರಾಯಣ. ಅವರ ಬಾಲ್ಯ- ದಿಟ್ಟ ಹೋರಾಟ-ಸಾಗಿ ಬಂದ ಹಾದಿಯನ್ನು ಈ ಕೃತಿಯಲ್ಲಿ ಲೇಖಕ ಬಿ.ಎಂ. ಚಂದ್ರಶೇಖರಯ್ಯ ಅವರು ಸವಿವರವಾಗಿ ನೀಡಿದ್ದಾರೆ.
ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿಯವರು. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ ಎ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಗಳಿಸಿದ್ದಾರೆ. ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 'ಜನಪದ' ಹಾಗೂ 'ಮಾರ್ಚ್ ಆಫ್ ಕರ್ನಾಟಕ' ಪತ್ರಿಕೆಗಳ ಉಪ ಹಾಗೂ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ‘ಚಿರ ಸ್ಮರಣೀಯರು’ ವ್ಯಕ್ತಿ ಚಿತ್ರಣ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಮತ್ತು ‘ಭಗತ್ ಸಿಂಗ್’ ಅವರ ಜೀವನ ಚರಿತ್ರೆ. ಮಾತ್ರವಲ್ಲದೆ ಆಯಾರಾಮ್ - ಗಯಾರಾಮ್, ನಮ್ಮೆಲ್ಲರ ಬಾಪು ಗಾಂಧೀಜಿ, ಮದನ ಮೋಹನ ಮಾಳವೀಯ ಇವು ಇವರ ಅನುವಾದಿತ ...
READ MORE