‘ನಾ ಕಂಡ ಅಣ್ಣ ಬಸವಣ್ಣ’ ಕೃತಿಯು ಎಂ.ಎಸ್. ಸಿಂಧೂರ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ‘ಎಂ. ಎಸ್. ಸಿಂಧೂರ ಅವರು ಬರೆದ 'ನಾ ಕಂಡ ಅಣ್ಣ ಬಸವಣ್ಣ' ಬಸವಣ್ಣನವರನ್ನು ಕುರಿತು ಬರೆದ ಮಹತ್ವದ ಕೃತಿಯಾಗಿದೆ. ಬಸವಣ್ಣನವರ ಕ್ರಾಂತಿಯನ್ನು ಅತ್ಯಂತ ಸಾರವತ್ತಾಗಿ ಹೇಳುತ್ತ ಅಂಗಾಯತ ಧರ್ಮದ ಪಾರಿಭಾಷಿಕ ಪದಗಳನ್ನು ಹೊಸದೃಷ್ಟಿಕೋನದಿಂದ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಬಸವ- ಬಿಜ್ಜಳರ ಸಂಬಂಧ ವಚನಗಳ ಮಹತ್ವ ಮೊದಲಾದ ಲೇಖನಗಳು ಅವರ ಆಳವಾದ ಅಧ್ಯಯನಕ್ಕೆ ಹಿಡಿದ ಕನ್ನಡಿಯಾಗಿವೆ. ವಚನಗಳು ನಮ್ಮ ಕನ್ನಡ ಸಾಹಿತ್ಯದ ಉಪನಿಷತ್ತುಗಳು, ವಚನಕಾರರು ನಮ್ಮ ಕನ್ನಡ ನಾಡಿನ ರಸಋಷಿಗಳು ಎಂದು ವಿದ್ವಜ್ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ರಸಋಷಿಗಳಾದ ಬಸವಾದಿ ಶರಣರ ದೃಷ್ಟಿಯಲ್ಲಿ 'ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯ'. ಅವರು ಪರಶಿವನ ಆರಾಧಕರು, ಭಕ್ತಿಯ ಪ್ರತಿಪಾದಕರು. ಹಾಗೆಯೇ ನಮ್ಮ ನಾಡು ಕಂಡ ಶ್ರೇಷ್ಠ ಅನುಭಾವಿಗಳು. ಇಂಥ ಅನುಭಾವಿಗಳಲ್ಲಿ ಅಗ್ರಗಣ್ಯರಾದ ಬಸವಣ್ಣನವರನ್ನು ಕುರಿತು ಎಂ. ಎಸ್. ಸಿಂಧೂರ ಅವರು ತಮ್ಮ ಸ್ವಾನುಭವದ ಕಥನವನ್ನು ಈ ಕೃತಿಯಲ್ಲಿ ರಮ್ಯವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದಿದೆ..
ಲೇಖಕ ಎಂ.ಎಸ್. ಸಿಂಧೂರ ಅವರು ಮೂಲತಃ ಬಾಗಲಕೋಟೆಯವರು. ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಕನ್ನಡ ಉಳಿವಿಗಾಗಿ ಹೋರಾಡಿದವರು. ಕೃತಿಗಳು : ನಾ ಕಂಡ ಅಣ್ಣ ಬಸವಣ್ಣ ಪ್ರಶಸ್ತಿ-ಪುರಸ್ಕಾರಗಳು : ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ...
READ MORE