ವಿಜ್ಞಾನಿ ಡಾ. ಸಿ.ವಿ. ರಾಮನ್ ಅವರ ವೈಜ್ಞಾಣಿಕ ಪ್ರಯೋಗಗಳು ಹಾಗೂ ಸಾಧನೆಗಳು ಕುರಿತು ಬರೆದ ಕೃತಿ-ರಾಮನ್ ಮತ್ತು ಅವರ ಪರಿಣಾಮ. ಲೇಖಕ ಅಡ್ಯನಡ್ಕ ಕೃಷ್ಣ ಭಟ್ ಅವರು ಬರೆದಿದ್ದು, ರಾಮನ್ ಒಬ್ಬ ವ್ಯಕ್ತಿಯಾಗಿ, ವಿಜ್ಞಾನಿಯಗಿ ಹಾಗೂ ಸಾಧಿಸಿದ ಸಾಧನೆಗಳನ್ನು ಇಲ್ಲಿ ವಿವರಿಸಲಾಗಿದೆ.
ಅಡ್ಯನಡ್ಕ ಕೃಷ್ಣಭಟ್ ಅವರು ಮಂಗಳೂರು ಬಳಿಯ ಅಡ್ಯನಡ್ಕದಲ್ಲಿ ಜನಿಸಿದರು. ಅವರು ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಪ್ರಸ್ತುತ ನಿವೃತ್ತಿ ಹೊಂದಿ ಮೈಸೂರಿನಲ್ಲಿ ನೆಲೆಸಿದ್ದಾರೆ. ವಿಜ್ಞಾನ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು. ಅವರ ಪ್ರಥಮ ಕೃತಿ ‘ಗಗನಯುಗ' 1964ರಲ್ಲಿ ಪ್ರಕಟವಾಯಿತು. 1966ರಲ್ಲಿ ವಿಜ್ಞಾನ ಪತ್ರಿಕೆ ವಿಜ್ಞಾನ ಲೋಕ'ದ ಸಂಪಾದಕರಾಗಿ ಬರವಣಿಗೆ ಶುರು ಮಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಚಟುವಟಿಕೆಯಲ್ಲಿಯೂ ಭಾಗಿಯಾದ್ದಾರೆ, ಸುಮಾರು 20ಕೃತಿಗಳನ್ನು ರಚಿಸಿದ್ದು, 'ಬಾಲ ವಿಜ್ಞಾನ', ‘ಕಿಶೋರ ವಿಜ್ಞಾನ’ನ ಪತ್ರಿಕೆಗಳ ಪ್ರಧಾನ ಸಂಪಾದಕರು ಆಗಿದ್ದರು. 1977ರಲ್ಲಿ 'ಸುದರ್ಶನ' ಡಾ. ಟಿ.ಎಂ.ಎ. ಪೈ ಅವರ ಅಭಿನಂದನ ಗ್ರಂಥ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ...
READ MORE