ಟಿ.ಎಸ್. ಸತ್ಯನ್ ಅವರ ‘ಕಾಲಕ್ಕೆ ಕನ್ನಡಿ’ ಕೃತಿಯು ಫೋಟೋಗ್ರಾಫರನ ಕೆಲವು ನೆನಪುಗಳನ್ನು ಕಟ್ಟಿಕೊಡುವ ಬರಹಗಳ ಸಂಕಲನವಾಗಿದೆ. ನಮ್ಮ ದೇಶದ ಛಾಯಾಗ್ರಾಹಕರಲ್ಲಿ ಅಗ್ರಪಂಕ್ತಿಗೆ ಸೇರಿದವರು ಸತ್ಯನ್. ಕ್ಯಾಮರಾ ಯಾವ ನಿಲುವಿನಲ್ಲಿರಬೇಕು. ಷಟರ್ ಗಳ ವೇಗ ಎಷ್ಟಿರಬೇಕು, ಯಾವ ಲೆನ್ಸ್ ಬಳಸಬೇಕು ಎಂದು ಗಂಟೆಗಟ್ಟಲೆ ಯೋಚಿಸುವ ಫೋಟೋಗ್ರಾಫರ್ ಗಳ ಗುಂಪಿಗೆ ಸೇರಿದವರಲ್ಲ ಸತ್ಯನ್. ಅವರ ಬುದ್ಧಿ ಮಿಂಚಿನ ವೇಗದಲ್ಲಿ ಚಲಿಸುತ್ತದೆ. ಅವರ ಕಣ್ಣು ಕ್ಯಾಮರಾ ಕಣ್ಣು ಕಾಣುವುದಕ್ಕಿಂತ ಹೆಚ್ಚಿನದನ್ನು ಗಮನಿಸುತ್ತದೆ. ಅವರು ತೆಗೆದಿರುವ ಪ್ರಖ್ಯಾತರ ಚಿತ್ರಗಳಿಗಿಂತ ಹೆಚ್ಚಾಗಿ ಅವರು ತೆಗೆದಿರುವ ಅನಾಮಧೇಯರ-ಹಳ್ಳಿಯ ಶಾಲಾ ಬಾಲಕ, ಕಳಕಳಿಯನ್ನು ತೋರಿಸುತ್ತಿರುವ ತಾಯಿ, ತಾನು ಧರಿಸಿರುವ ಒಡವೆಗಳ ಪ್ರಭೆಯನ್ನು ಮೀರಿಸುತ್ತಿರುವ ಕಣ್ಣಿನ ಬೆಳಕನ್ನು ಬೀರುತ್ತಿರುವ ಗುಳಿಕೆನ್ನೆಯ ಮುಗ್ಧ ಹುಡುಗಿ, ಇಂಥವರ ಚಿತ್ರಗಳಲ್ಲಿ ಸತ್ಯನ್ ಅವರ ಪ್ರತಿಭೆ, ಸಹನಾಭೂತಿಗಳು ಬೆಳಗುತ್ತಿವೆ ಎಂಬುದನ್ನು ಈ ಕೃತಿಯ ಮುಖೇನ ಕಾಣಬಹುದು.
ಪತ್ರಿಕಾರಂಗದಲ್ಲಿ ಐದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಲೇಖಕ, ಫೋಟೋಗ್ರಾಫರ್ ಟಿ.ಎಸ್. ಸತ್ಯನ್. 1923 ಡಿಸೆಂಬರ್ 18ರಂದು ಮೈಸೂರಿನಲ್ಲಿ ಜನನ. ಚಿಕ್ಕ ವಯಸ್ಸಿನಿಂದಲೇ ಛಾಯಾಚಿತ್ರ ಕಲೆ, ಪತ್ರಿಕೋದ್ಯಮಗಳಲ್ಲಿ ತೀವ್ರ ಆಸಕ್ತಿ ತಳೆದವರು. ವಿಖ್ಯಾತ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿ1944ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಿ.ಎ ಪದವಿ ಪಡೆದ ಸತ್ಯನ್ ಅವರ ನಿಜಜೀವನದ ಛಾಯಾಚಿತ್ರಗಳೂ, ಲೇಖನಗಳೂ ಭಾರತದ ಹತ್ತಾರು ದೈನಿಕ, ಸಾಪ್ತಾಹಿಕ ಮತ್ತಿತರ ಪತ್ರಿಕೆಗಳಲ್ಲಿ ಮಾತ್ರವಲ್ಲದೆ, ಅಮೆರಿಕದ ಪ್ರತಿಷ್ಠಿತ ‘ಲೈಫ್’ ಹಾಗೂ ಇಂಗ್ಲೆಡ್ ಮತ್ತು ಐರೋಪ್ಯ ದೇಶಗಳ ಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಭಾರತದ ...
READ MORE