`ಹಕ್ಕ-ಬುಕ್ಕ' ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಬಿ. ಪುಟ್ಟಸ್ವಾಮಯ್ಯ ಅವರು ರಚಿಸಿದ್ದಾರೆ. ಪರಕೀಯರ ದಬ್ಬಾಳಿಕೆಯಿಂದ ದೇಶ-ಧರ್ಮಗಳಿಗೆ ಹಾನಿಯಾಗುತ್ತಿರುವಾಗ ’ಮರೆಯಲಾಗದ’ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರಾದ ವೀರ ಸಹೋದರರು. ಯುದ್ಧವನ್ನೂ ಶಾಂತಿಯನ್ನೂ ಗೆದ್ದ ದೇಶಸೇವಕರು. ಧರ್ಮ, ಸಂಸ್ಕೃತಿಗಳನ್ನು ರಕ್ಷಿಸಿ ಹೊಸ ಯುಗವನ್ನು ನಿರ್ಮಿಸಿದ ಶೂರರು ಎಂದು ಹಕ್ಕ-ಬುಕ್ಕರ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ವಿಜಯನಗರದ ಸ್ಥಾಪಣೆಯ ಇತಿಹಾಸ, ಹಕ್ಕ-ಬುಕ್ಕ ರ ಬಾಲ್ಯ ಜೀವನ, ಯುದ್ಧವಿದ್ದರೂ ಶಾಂತಿಯನ್ನು ತೋರಿಸಿಕೊಟ್ಟ ಬಗೆ ...ಹೀಗೆ ಹಕ್ಕ-ಬುಕ್ಕ ರ ಜೀವನದ ವಿವಿಧ ಆಯಾಮಗಳನ್ನು ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
ಕನ್ನಡ ನಾಟಕ ಸಾಹಿತ್ಯ ಮತ್ತು ಕಾದಂಬರಿ ಲೋಕಕ್ಕೆ ತಮ್ಮ ವಿಶಿಷ್ಟ ಕೊಡುಗೆಗಳ ಮೂಲಕ ಗಮನ ಸೆಳೆದವರು ಬಿ. ಪುಟ್ಟಸ್ವಾಮಯ್ಯ. ಪತ್ರಿಕೋದ್ಯಮಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ಕವಿಯಾಗಿ ಅನುಪಮ ಕೊಡುಗೆ ನೀಡಿದ ಪುಟ್ಟಸ್ವಾಮಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. 1897ರ ಮೇ 27ರಂದು ಜನಿಸಿದ ಪುಟ್ಟಸ್ವಾಮಿ ಅವರ ತಂದೆ ಬಸಪ್ಪಯವರು ರೇಷ್ಮೆ ವ್ಯಾಪಾರಿಯಾಗಿದ್ದರು. ತಾಯಿ ಬಸಮ್ಮ. ಬೆಂಗಳೂರಿನ ಸುಲ್ತಾನ್‌ಪೇಟೆ ಹಿಂದೂ ಎ.ವಿ. ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಸೈಂಟ್ ಜೋಸೆಫ್ ಕಾಲೇಜ್ ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ತಂದೆಯವರನ್ನು ಕಳೆದುಕೊಂಡದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ಅದರಿಂದಾಗಿ ...
READ MORE