ಲೇಖಕಿ ಅನುಪಮಾ ಎಚ್. ಎಸ್. ಅವರು ಬರೆದ ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನ- ಸಾಧನೆಯ ಕೃತಿ ʼನವಭಾರತದ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ʼ. ಈ ದೇಶದ ದಲಿತರ ಬಗ್ಗೆ, ಶೋಷಿತರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಅಂಬೇಡ್ಕರ್ ಅವರು ವಹಿಸಿದ ಕಾಳಜಿ, ಅವರ ಹೋರಾಟ, ಕೊಡುಗೆ ಇವೆಲ್ಲದರ ಬಗ್ಗೆ ಪುಸ್ತಕವು ಹೇಳುತ್ತಾ ಹೊಗುತ್ತದೆ. ಭಾರತ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಇತಿಹಾಸವು ಎಂದಿಗೂ ಮರೆಯಲಾಗದಂತಹ ಚಿಂತನೆಗಳನ್ನು ನೀಡಿ ಪ್ರಭಾವಿತ ಗೊಳಿಸಿದವರು ಅಂಬೇಡ್ಕರ್. ಇವರು ತಮ್ಮ ಸಮಕಾಲೀನ ರಾಜಕೀಯ ನಾಯಕರಲ್ಲಿ ಅತ್ಯಂತ ಹೆಚ್ಚಿನ ವಿದ್ಯಾವಂತರಾಗಿದ್ದರು. ತಮ್ಮ ಬಹುಜ್ಞಾನ ಶಿಸ್ತುಗಳಿಗೆ ಹೆಸರಾದವರು. ಕೋಳಿ ಸಾಕಣೆಯಿಂದ ಹಿಡಿದು ಸಾಪೇಕ್ಷ ಸಿದ್ಧಾಂತದವರೆಗೆ ಮಾತನಾಡಬಲ್ಲವರಾಗಿದ್ದರು. ಲಂಡನ್ನಿನ ದುಂಡು ಮೇಜಿನ ಪರಿಷತ್ತಿಗೆ ಹೋಗಿದ್ದ ಅಂಬೇಡ್ಕರ್ ಅಲ್ಲಿ 57 ಪೆಟ್ಟಿಗೆಗಳಷ್ಟು ಪುಸ್ತಕಗಳನ್ನು ಕೊಂಡು ಭಾರತಕ್ಕೆ ಹಡಗಿನ ಮೂಲಕ ರವಾನಿಸಿದ್ದರು. ವಿದ್ಯಾರ್ಥಿಯಾಗಿದ್ದಾಗ ದಿನಕ್ಕೆ 18 ಗಂಟೆಗಳ ಕಾಲ ಓದುತ್ತಿದ್ದರು ಅಂಬೇಡ್ಕರ್! ಅಂಬೇಡ್ಕರ್ ಅವರು ಯಾವುದೇ ವಿಷಯವನ್ನಾಗಲಿ ಮೂಲ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಅವರ ವಿಶೇಷ ಗುಣವಾಗಿತ್ತು. ಈ ಪುಸ್ತಕವು ಅಂಬೇಡ್ಕರ್ ಅವರ ಜೀವನಕ್ಕೆ ಹಿಡಿದ ಕನ್ನಡಿಯಂತಿದೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE