ಲೇಖಕ ಬಿ. ಸುರೇಂದ್ರ ರಾವ್ ಅವರು ಇತಿಹಾಸ ಸಂಶೋಧಕರು ಹಾಘೂ ಪ್ರಾಧ್ಯಾಪಕರು. ಪುತ್ತೂರಿನ 1968ರಲ್ಲಿ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವೀಧರರು. 1970ರಲ್ಲಿ ಮೈಸೂರು ವಿಶ್ವವಿದ್ಯಾನಿಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1976ರಲ್ಲಿ ಪ್ರೊಫೆಸರ್ ಫೇಕ್ ಅಲಿಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿದರು. ಮೈಸೂರಿನ ಮಾನಸಗಂಗೋತ್ರಿಯ ಜೂನಿಯರ್ ರಿಸರ್ಚ್ ಪೋಸ್ಟ್ ಗ್ರ್ಯಾಜುಯೇಚ್ ಡಿಪಾರ್ಟ್ಮೆಂಟ್ ನಲ್ಲಿ 1970-1972ರವರೆಗೆ ಜವಾಹರ ಲಾಲ್ ನೆಹರು ಯೋಜನೆಯ ಸಂಶೋಧನ ಸಹಾಯಕರಾಗಿ ಸೇವೆಸಲ್ಲಿಸಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಲೀಡರ್ ಆಗಿ 1982-1993ರವರೆಗೆ ಸೇವೆಸಲ್ಲಿಸಿ, ಆನಂತರ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಇವರ ಮಾರ್ಗದರ್ಶನದಲ್ಲಿ 12 ಜನ ಪಿಎಚ್ ಡಿ ಹಾಗೂ 6 ವಿದಸ್ಯಾರ್ಥಿಗಳು ಎಂ.ಫಿಲ್ ಪಡೆದಿದ್ದಾರೆ. ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸೆನೆಟ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ಜೊತೆಗೆ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಆಗಿ, ವಿಶ್ವವಿದ್ಯಾನಿಲಯ ಹಾಸ್ಟೆಲ್ ಕಮಿಟಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೇ, ಕರ್ನಾಟಕ ಕೇರಳ ತಮಿಳುನಾಡು ಆಂಧ್ರ ಪ್ರದೇಶ ಗೋವಾ ರಾಜ್ಯಗಳ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ನಿರ್ದೇಶಕರಾಗಿ, ಆಧುನಿಕ ಭಾರತದ ಇತಿಹಾಸ ಕಾಂಗ್ರೆಸ್ ಸಮ್ಮೇಳನದಲ್ಲಿ ಕಲ್ಕತ್ತಾ ವಿಭಾಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್ ದೆಹಲಿ ಸಂಘದ ಸದಸ್ಯರಾಗಿದ್ದರು.
ಕೃತಿಗಳು : ಅಪೂರ್ವ ಕೊಡಗಿನ ಅನ್ವೇಷಣೆ ಇತಿಹಾಸ ಮತ್ತು ಸಮಾಜ ಹಿಸ್ಟರಿ ಅಫ್ ಸ್ಟೀರಿಯೋ ಗ್ರಫಿ ಬಂಟರ ಇತಿಹಾಸ ಮತ್ತು ಸಂಸ್ಕೃತಿ ( ಅನುವಾದಗಳು): ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ಬಂಟರು ಕರ್ನಾಟಕ ಆರ್ಥಿಕ ಮತ್ತು ಸಾಮಾಜಿಕ ಚರಿತ್ರೆಯ ಕೆಲವು ನೆಲೆಗಳು (ಸಂಪಾದಿತ ಕೃತಿಗಳು)
ಪ್ರಶಸ್ತಿ-ಪುರಸ್ಕಾರಗಳು: ಲ್ಯಾಂಡ್ ಇನ್ ಎ ಗೋಲ್ಡನ್ ಬೌಲ್ ಡಿ ರೈನ್ ಬಾಯ್ ಮಿತ್ತಬೈಲು ಯಮುನಕ್ಕ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿ ಗಳು ಲಭಿಸಿವೆ. ಬಿ.ಸುರೇಂದ್ರ ರಾವ್ ಅವರು 9 ಡಿಸೆಂಬರ್ 2019ರಂದು ನಿಧನರಾದರು.