ಡಾ. ಸೋಮನಾಥ ಯಾಳವಾರ ರವರು ರಚಿಸಿರುವ "ಕಿನ್ನರಿ ಬ್ರಹ್ಮಯ್ಯ" ಎನ್ನುವ ಕೃತಿಯನ್ನು ಅವಲೋಕಿಸಿದಾಗ, ಈ ಕೃತಿಯಲ್ಲಿ ಕಿನ್ನರಿ ಬ್ರಹ್ಮಯ್ಯ ನವರ ಕೌಟುಂಬಿಕ ಜೀವನ ಹಾಗೂ ಧಾರ್ಮಿಕ ಹಿನ್ನಲೆ,ವೀರವ್ರತಿ -ಸದಾಚಾರಿ ಬ್ರಹ್ಮಯ್ಯ, ಕಲ್ಯಾಣಕ್ಕೆ ಆಗಮನ, ಅನುಭವಮಂಟಪದಲ್ಲಿ ಕಿನ್ನರಯ್ಯ, ಮಹಾಮನೆಯ ಕಾರ್ಯದಲ್ಲಿ, ಮರುಳ ಶಂಕರದೇವನ ಕಂಡದ್ದು, ಅಕ್ಕಮಹಾದೇವಿಯನ್ನು ಸ್ವಾಗತಿಸಿದ್ದು, ಸೇರಿದಂತೆ ಹಲವಾರು ವಚನಗಳಲ್ಲಿ ದರ್ಶನವನ್ನು ನೀಡಿದ ಕೃತಿ ಅದ್ಭುತವಾಗಿ ಮೂಡಿ ಬಂದಿದೆ. ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡಿದ್ದು 64 ಪುಟಗಳಿದ್ದು,25 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ.ಸೋಮನಾಥ ಯಾಳವಾರ ಅವರ ಹುಟ್ಟೂರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ. ತಂದೆ ಸಿದ್ದಪ್ಪ ತಾಯಿ ಶಿವಾನಂದಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ತಾರಾನಾಳ ಹಾಗೂ ಡಾವಳಗಿಯಲ್ಲಿ ಪ್ರೌಢಶಿಕ್ಷಣ, ಮುದ್ದೇಬಿಹಾಳದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿ.ವಿ.ಯಿಂದ ಎಂ.ಎ ಪಡೆದರು. 1976ರಲ್ಲಿ ಭಾಷಾ ಶಾಸ್ತ್ರದಲ್ಲಿ ಡಿಪ್ಲೊಮ ಪದವಿ ಮುಗಿಸಿದರು. ಧಾರವಾಡದ ಮುರುಘಾಮಠವು ಇವರಿಗೆ ಧಾರ್ಮಿಕ -ಅಧ್ಯಾತ್ಮಿಕ ಶಿಕ್ಷಣ ನೀಡಿತು. 1995ರಲ್ಲಿ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ (1995) ಪದವಿ ಪಡೆದರು. ಕೆಲವು ವರುಷ ಕಾಲ ಆಲಮಟ್ಟಿ ಆಣೆಕಟ್ಟು ನಿಯಂತ್ರಣ ವಿಭಾಗದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು.ತದನಂತರ ಹುಮನಾಬಾದ ತಾಲೂಕಿನ ಬಸವತೀರ್ಥ ಚೆನ್ನಬಸವ ಸ್ವಾಮೀಜಿ ಕಲಾ ...
READ MORE