‘ಅಪೂರ್ವ ರಾಜಕಾರಣಿ ಎಚ್.ಜಿ.ಗೋವಿಂದಗೌಡ’ಈ ಕೃತಿಯನ್ನು ಲೇಖಕಿ ದೀಪಾ ಹಿರೇಗುತ್ತಿ ರಚಿಸಿದ್ದಾರೆ. ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿ ಇದು. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕೆಲವರ ವ್ಯಕ್ತಿತ್ವವೇ ಹಾಗೆ- ಯಾವಾಗ ನೆನೆದರೂ ನಂದಾದೀಪದಂತೆ ಮನಸ್ಸಿಗೆ ಪ್ರಸನ್ನತೆಯನ್ನು ನೀಡುತ್ತದೆ. ಇಂತಹ ಮಹನೀಯರಲ್ಲಿ ಎಚ್.ಜಿ. ಗೋವಿಂದಗೌಡರೂ ಒಬ್ಬರು. ದಕ್ಷತೆ, ಪ್ರಾಮಾಣಿಕತೆ, ಬದ್ಧತೆ, ಸತ್ಯನಿಷ್ಠೆ, ಸಾಮಾಜಿಕ ಕಳಕಳಿ, ಶಿಸ್ತು, ಮುಂತಾದ ಮೌಲ್ಯಗಳಿಗೆ ಹೊಳಪು ತಂದವರು. ಸೃಜನಪಕ್ಷಪಾತ, ಸ್ವಹಿತಾಸಕ್ತಿ, ಯಾವತ್ತೂ ಅವರ ಹತ್ತಿರ ಸುಳಿಯಲಿಲ್ಲ. ಕುಲಕಸುಬು ಕೃಷಿಯನ್ನು ನೆಚ್ಚಿ ತಮ್ಮ ಮಕ್ಕಳೂ ಕೂಡ ಅದರಲ್ಲಿಯೇ ಮುಂದುವರಿಯುವಂತೆ ಪ್ರೋತ್ಸಾಹಿಸಿದವರು. ರಾಜ್ಯದ ಪ್ರಭಾವಶಾಲಿ ರಾಜಕಾರಣಿ, ಸಚಿವರಾಗಿದ್ದಾಗ ಯಾರೂ ತಮ್ಮ ಕಾರ್ಯದಲ್ಲಿ ಮೂಗು ತೂರಿಸಿದಂತೆ ನಿಷ್ಠುರವಾಗಿ ಕೆಲಸ ಮಾಡಿದರು. ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಗೌಡರು ಸರಳ ಜೀವನ ನಡೆಸಿದವರು. ದೈವಭಕ್ತರಾದರೂ ಮೌಢ್ಯದಿಂದ ದೂರವಿದ್ದವರು. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಅವರು ಮಾಡಿದ ಕಾರ್‍ಯಗಳು ಇಂದಿಗೂ ಮಾದರಿ, ಅನುಕರಣೀಯ. ಲಕ್ಷಾಂತರ ಜನಕ್ಕೆ ಭ್ರಷ್ಟಾಚಾರದ ಸೋಂಕು ತಾಗದಂತೆ ಎಚ್ಚರವಹಿಸಿ ಉದ್ಯೋಗ ನೀಡಿದ ಕೀರ್ತಿ ಅವರದು. 'ಅಪೂರ್ವ ರಾಜಕಾರಣಿ ಎಚ್.ಜಿ. ಗೋವಿಂದಗೌಡ' ಕೃತಿಯ ಮೂಲಕ ಲೇಖಕಿಯು ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.
ಕವಿ, ಲೇಖಕಿ ದೀಪಾ ಹಿರೇಗುತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದವರು. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಕನ್ನಡದ ಸಶಕ್ತ ಅಂಕಣಗಾರ್ತಿ ಎಂಬುದನ್ನು “ನಾನು, ನೀವು ಮತ್ತು ...” ಅಂಕಣ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. 'ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ. ದಸರಾ ಕವಿಗೋಷ್ಠಿ, ಸಂಕ್ರಮಣ, ಪ್ರಜಾವಾಣಿ ಸಂಚಯ, ತಿಂಗಳು ಕವನಸರ್ಧೆಯಲ್ಲಿ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಲೇಖಕರ ಸಂಘದಿಂದ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ...
READ MORE