‘ಟಿಪಿಕಲ್ ಟಿ.ಪಿ. ಕೈಲಾಸಂ’ ಕೃತಿಯು ಕೈಲಾಸಂ ಅವರ ಜೀವನ ಹಾಗೂ ಅವರ ಕೃತಿಗಳನ್ನು ಕುರಿತ ಕೆ.ಎನ್. ಭಗವಾನ್ ಅವರ ಕೃತಿಯಾಗಿದೆ. ಇದರರ್ಧ ಭಾಗ ಕೈಲಾಸಂ ಜೀವನ ದರ್ಶನ, ಉಳಿದರ್ಧ ಅವರ ಕೃತಿಗಳ ಅವಲೋಕನ. ಕೈಲಾಸಂರ ಹಾಡುಗಳು, ಅಲ್ಲದೆ ಕೆಲವು ಜೋಕುಗಳು, ಅಲ್ಲದೆ ಪುಸ್ತಕದ ಕೊನೆಯಲ್ಲಿ ಅವರ ಪ್ರಕಟಿತ ಕೃತಿಗಳ ಪಟ್ಟಿ-ಈ ಎಲ್ಲವೂ ಈ ಪುಸ್ತಕವನ್ನು
ಒಂದು ಸಂಗ್ರಹಯೋಗ್ಯ ಪುಸ್ತಕ ಅನ್ನಿಸಿಕೊಳ್ಳುವಂತೆ ಮಾಡಿವೆ.
ಇಲ್ಲಿ ಕೈಲಾಸಂ ಸ್ವತಃ ಹೇಳುತ್ತಾರೆ ಎನ್ನುವುದನ್ನು ಲೇಖಕರು ದಾಖಲಿಸಿರುವುದು ಹೀಗೆ: ನಾನು ನಾಟಕ ಬರೆಯುವ ಉದ್ದೇಶ ಬುದ್ದಿ ಇರುವವರನ್ನು ಅವರ ಕೃತಿಗಳನ್ನು ಓದಿದರೆ, ಅವರ ನಾಟಕಗಳನ್ನು ಆಡಿದರೆ ಓದಿದರೆ, ನಮಗೆ ಹಾಸ್ಯದ ರಸದೌತಣ. ಮನರಂಜನೆಯ ಮಹಾಪೂರ. ಆದರೆ ಹೃದಯ ಉಪಯೋಗಿಸಿ ನೋಡಿ, ಓದಿ… ಅವರು ಸೃಷ್ಟಿಸಿರುವ ಪಾತ್ರಗಳ ಒಳಹೋಗಿ ನೋಡಿ.. ಆಗ ಕಣ್ಣು ಒದ್ದೆಯಾಗುವುದಿಲ್ಲವಾ? ಮನಸ್ಸು ಕಲುಕುವುದಿಲ್ಲವಾ? ಇಲ್ಲ ಅಂದರೆ ನಿಮಗೆ ಪೂರ್ತಿ ಅರ್ಥವಾಗಿಲ್ಲ ಎಂದು ಅರ್ಥ!
ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು. ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...
READ MORE