ಲೇಖಕ ಎಚ್.ಆರ್. ವಿಶ್ವಾಸ ಅವರ ಕೃತಿ-ಮತ್ತೆ ಹೊತ್ತಿತು ಹೀಬ್ರೂ ಹಣತೆ. ಹೀಬ್ರೂವನ್ನು ಮತ್ತೆ ಜನರ ಆಡುಭಾಷೆಯನ್ನಾಗಿ ಮಾಡುವುದಕ್ಕೆ ಬೆನ್ - ಯಹೂದ, ತನ್ನ ಇಡೀ ಜೀವನವನ್ನು ಮುಡುಪಿಟ್ಟ. ಹೀಬ್ರೂ ಪ್ರಚಾರಕ್ಕಾಗಿ ವಿವಿಧ ಮುಖ ಅಭಿಯಾನಗಳನ್ನು ನಡೆಸಿದ. ಪತ್ರಿಕೆಯನ್ನು ಆರಂಭಿಸಿದ. ಹೊಸಶಬ್ದಗಳನ್ನು ಸೃಷ್ಟಿಸಿದ . ನಿಘಂಟುವನ್ನು ರಚಿಸಿದ. ಅವನ ದೇಹಾವಸಾನದ ವೇಳೆಗೆ ಅವನ ಹೆಚ್ಚಿನ ಕನಸುಗಳು ನನಸಾಗಿದ್ದವು. ಆಗ ಇನ್ನೂ, ಇಸ್ರೇಲ್ ಸ್ವತಂತ್ರವಾಗಿರದಿದ್ದರೂ ಹೀಬ್ರೂ ವ್ಯಾವಹಾರಿಕ ಭಾಷೆಯಾಗಿ ಅಲ್ಲಿ ನೆಲೆಗೊಂಡಿತ್ತು; ಆಧುನಿಕ ಭಾಷೆಯಾಗಿ ವಿಕಾಸ ಹೊಂದಿತ್ತು; ಶಾಲೆ, ಕಾಲೇಜು, ಕಚೇರಿ, ನ್ಯಾಯಾಲಯ, ರಂಗಭೂಮಿ - ಎಲ್ಲೆಡೆ ಅದು ರೂಢಿಗೆ ಬಂದಿತ್ತು. ಬೆನ್ - ಯಹೂದನ ಧ್ಯೇಯಾಭಿಮುಖ ಜೀವನದಲ್ಲಿ ಎದುರಾದ ಕಠಿಣ ಪರಿಸ್ಥಿತಿಗಳನ್ನು ಅವನು ಎದುರಿಸಿದ ರೀತಿ ಪ್ರೇರಣಾದಾಯಕ. ರೋಮಾಂಚಕ ಮತ್ತು ಹೃದಯಸ್ಪರ್ಶಿ ಸನ್ನಿವೇಶಗಳಿಂದ ತುಂಬಿರುವ ಕಥಾನಕ-, ’ಮತ್ತೆ ಹೊತ್ತಿತು ಹೀಬ್ರೂ ಹಣತೆ’.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE1922 ರಲ್ಲಿ ತಾನು ಸಾಯುವ ಮೊದಲು ಬೆನ್ ಯಹೂದ, ಬಾಲ್ಯದಿಂದಲೂ ಕಂಡಿದ್ದ, ಎರಡು ಸಾವಿರ ವರ್ಷಗಳಿಂದ ವ್ಯವಹಾರದಿಂದ ದೂರವಾಗಿದ್ದ ಹೀಬ್ರೂ ಭಾಷೆಯನ್ನು ಮತ್ತೆ ದಿನಬಳಕೆಗೆ ತರಬೇಕು ಎಂಬ ಅದ್ಭುತ ಸ್ವಪ್ನ ಸಾಕಾರಗೊಂಡಿದ್ದನ್ನು ಕಂಡಿದ್ದ. ವಸ್ತುತಃ ಅವನು ಗತಿಸಿದ 26 ವರ್ಷಗಳ ನಂತರವಷ್ಟೆ (1948ರಲ್ಲಿ) ಇಸ್ರೇಲ್, ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಪಡೆಯಿತಾದರೂ, ಅದಕ್ಕಿಂತ ತುಂಬ ಮೊದಲೇ, ಅಂದರೆ ಅವನು ಸಾಯುವುದಕ್ಕೆ ಮೊದಲು ಹೀಬ್ರೂ ಭಾಷೆ ದಿನಬಳಕೆಗೆ ಬಂದಿತ್ತು. ಶಿಕ್ಷಣದ ಹಾಗೆ ವಾಣಿಜ್ಯದ, ಕ್ರೀಡೆಯ, ಎಲ್ಲ ವಿಧದ ಸಾಮಾಜಿಕ ವ್ಯವಹಾರಗಳ ಭಾಷೆಯಾಗಿ ಅದು ಪೂರ್ಣಪ್ರಮಾಣದಲ್ಲಿ ವಿಕಸಿತವಾಗಿತ್ತು. ಅದರಲ್ಲೂ, ’ಕೆಲವೇ ತಿಂಗಳಲ್ಲಿ ಸಾಯಲಿದ್ದಾನೆ’ ಎಂದು ವೈದ್ಯರು ಸ್ಪಷ್ಟವಾಗಿ ಸೂಚಿಸಿದ್ದ ವ್ಯಕ್ತಿಯೊಬ್ಬ, ಕೇವಲ ಆತ್ಮಬಲದಿಂದ, ಇಚ್ಛಾಶಕ್ತಿ ಮಾತ್ರದಿಂದ ಮತ್ತೆ ಅಷ್ಟು ದೀರ್ಘಕಾಲದವರೆಗೆ ಬದುಕಿದ್ದು ,ಜೀವನದಲ್ಲಿ ಯಾರೂ ಮಾಡದ ಅಸಾಧಾರಣ ಸಾಧನೆ ಮಾಡಿದ್ದ. ಇದರಿಂದಾ,ಗಿ ನಿಘಂಟುವಿನ ಕೆಲಸ ಪೂರ್ತಿ ಮುಗಿಯದಿದ್ದರೂ ಅವನು ಸಂತೃಪ್ತಿಯಿಂದಲೇ ಕೊನೆಯುಸಿರನ್ನು ಎಳೆದಿರಬೇಕು. ಎಷ್ಟು ಮಂದಿಗೆ ಸಿಕ್ಕೀತು ಇಂತಹ ಭಾಗ್ಯ !